ಅಡುಗೆ

ರುಚಿಕರ ಅಡುಗೆ 
ರಸಿಕರೇ,
ಸವಿರುಚಿ ಅಡುಗೆ ತಿಂಡಿ ತಿನಿಸುಗಳನ್ನು ಹಂಚಿಕೊಳ್ಳಲು ಈ  ರುಚಿಕರ ಅಡುಗೆ ಪುಟ ತಮಗಾಗಿ.
ತಮಗೂ ಹೊಸ ಅಥವಾ ಪ್ರಸಿದ್ಧ ಅಡುಗೆ ತಿಳಿದಿದ್ದರೆ ಇಲ್ಲಿ ಹಂಚಿಕೊಳ್ಳಿ. For more than 200 recipes visit  http://www.sugamakannada.com/recipes/

ರವೆ ಹೋಳಿಗೆ

ಬೇಕಾಗುವ ಸಾಮಗ್ರಿಗಳು  
ಒಂದು ಕಿಲೋ ಮೈದಾಹಿಟ್ಟು ಒಂದು ಕಿಲೋ ಸಕ್ಕರೆ ಅರ್ಧಕಿಲೋ ಸಣ್ಣರವೆ ಯಾಲಕ್ಕಿ 10 ಕಾಲು ಕಿಲೋ ತುಪ್ಪ ಅರ್ಧ ಬಟ್ಟಲು ಎಣ್ಣೆ  

ಮಾಡುವ ವಿಧಾನ 
  • ಬಾಣಲೆಯಲ್ಲಿ ರವೆಯನ್ನು ಘಂ ಎಂದು ವಾಸನೆ ಬರುವವರೆಗೂ ಹುರಿದು ಅದಕ್ಕೆ ಎರಡರಷ್ಟು ನೀರು ಹಾಕಿ ಬೇಯಿಸಿ ಸಕ್ಕರೆ ಸ್ವಲ್ಪ ತುಪ್ಪ ಬೆರೆಸಿ ಬಾಡಿಸಿ 
  • ಆರಿದ ರವೆಮಿಶ್ರಣಕ್ಕೆ ಯಾಲಕ್ಕಿ ಪುಡಿ ಬೆರೆಸಿ ನಿಂಬೆ ಗಾತ್ರದ ಉಂಡೆಗಳನ್ನು ಮಾಡಿಕೊಳ್ಳಿ(ಹೂರಣ) 
  • ಮೈದಾಹಿಟ್ಟನ್ನು ಪೂರಿ ಹಿಟ್ಟಿನಂತೆ ಚೆನ್ನಾಗಿ ಕಲಸಿ ನಾದಿರಿ  
  • ಹಿಟ್ಟನ್ನು ನಿಂಬೆ ಗಾತ್ರದಲ್ಲಿ ತೆಗೆದು ಬಟ್ಟಲಿನಂತೆ ಹಳ್ಳಮಾಡಿ ಹೂರಣ ತುಂಬಿ ಅದೇ ಹಿಟ್ಟಿನಿಂದ ಮುಚ್ಚಿ ಲಟ್ಟಿಸಿ 
  • ಕಾದ ಕಾವಲಿಯ ಮೇಲೆ ತುಪ್ಪ ಬಳಸಿ ಸುಡುವುದು. ಬಿಸಿಬಿಸಿ ಇದ್ದಾಗಲೇ ಹಾಲು ತುಪ್ಪದೊಡನೆ ತಿನ್ನಲು ಕೊಡಿ  

ಬಂನ್ಸ್(ಮಂಗಳೂರು ಶೈಲಿ) 

ಬೇಕಾಗುವ ಸಾಮಗ್ರಿಗಳು 
ಅರ್ಧ ಕಿಲೋ ಮೈದಾಹಿಟ್ಟು ಒಂದು ಲೋಟ ಸಕ್ಕರೆ ನಾಲ್ಕಾರು ಬಾಳೇಹಣ್ಣು ಏಲಕ್ಕಿ ಪುಡಿ ಅರ್ಧ ಚಮಚ ಎಣ್ಣೆ ಕರಿಯಲು 

ಮಾಡುವ ವಿಧಾನ 
  • ಮೈದಾಹಿಟ್ಟಿಗೆ,ಏಲಕ್ಕಿ ಪುಡಿ, ಕಿವಿಚಿದ ಬಾಳೇಹಣ್ಣನ್ನು ಬೆರೆಸಿ ಚಪಾತಿ ಹಿಟ್ಟಿನಂತೆ ಕಲಸಿ(ನೀರು ಬೇಡ) 
  • ಕಲಸುವಾಗ ಒಂದೆರೆಡು ಚಮಚ ಕಾದ ಎಣ್ಣೆ ಬೆರೆಸಿಕೊಂಡರೆ ಬಂನ್ಸ್ ಗರಿ ಗರಿಯಾಗಿರುತ್ತದೆ. 
  • ಎಣ್ಣೆ ಕಾದ ನಂತರ ಪೂರಿಗಿಂತ ಪುಟ್ಟದಾಗಿ ಲಟ್ಟಿಸಿ ಕರೆಯಿರಿ. ಉಬ್ಬಿ, ಬೆಂದ ಬಂನ್ಸ್ ಹದಿನೈದು ದಿನಗಳವರೆಗೂ ಫ್ರಿಡ್ಜ್ ಇಲ್ಲದೇ ಇಡಬಹುದು
  • ಅವರೇಕಾಳು ಸಾರು 

ಬೇಕಾಗುವ ಸಾಮಗ್ರಿಗಳು 
ಅರ್ಧ ಕಿಲೋ ಅವರೇಕಾಳು ತೊಗರಿ ಬೇಳೆ ಕಾಲು ಕಿಲೋ ಸಾರು ಅಥವಾ ಮೆಣಸಿನ ಪುಡಿ ಎರಡು ಚಮಚ ಕೊತ್ತಂಬರಿ ಸೊಪ್ಪು ಅರ್ಧ ಕಟ್ಟು ಕರಿಬೇವು ನಿಂಬೆ ಗಾತ್ರ ಹುಣಸೇ ಹಣ್ಣು ತುಪ್ಪ ಅಥವಾ ಎಣ್ಣೆ ಒಂದು ಚಮಚ, ಸಾಸಿವೆ,ಇಂಗು 

ಮಾಡುವ ವಿಧಾನ 
  • ಸಿಪ್ಪೆ ಸುಲಿದ ಅವರೇಕಾಳು, ತೊಗರಿ ಬೇಳೆಯನ್ನು ಪಾತ್ರೆಯೊಂದರಲ್ಲಿ ಅಥವಾ ಕುಕ್ಕರ್ನಲ್ಲಿ ಬೇಯಿಸಿಕೊಳ್ಳಿ 
  • ಕುದಿಯುವ ಬೇಳೆಗೆ ಮೆಣಸಿನ ಪುಡಿ, ಕೊತ್ತಂಬರಿ ಸೊಪ್ಪು,ಕರಿಬೇವು ಬಿಡಿಸಿ ಹಾಕಿ 
  • ಹುಣಸೇ ರಸ ಬೆರೆಸುವ ಮುನ್ನ ಉಪ್ಪು ಹಾಕಿ 
  • ಒಗ್ಗರಣೆ ಸುರಿದು ತಿನ್ನಲು ಬಳಸಿ

ಅಮೃತ ಪಾನಕ

ಬೇಕಾಗುವ ಸಾಮಗ್ರಿಗಳು 

ಕಳತಾದ ಹುಣಸೇ ಹಣ್ಣು ಒಂದು ನಿಂಬೇ ಗಾತ್ರ ಕರಿ ಮೆಣಸಿನ ಪುಡಿ ಚಿಟಿಕೆ ಬೆಲ್ಲ (ಸಿಹಿಗೆ) ನಾಲ್ಕು ಚಮಚ ಉಪ್ಪು ಚಿಟಿಕೆ 

ಮಾಡುವ ವಿಧಾನ 
  • ಹುಣಸೇಹಣ್ಣನ್ನು ಐದು ನಿಮಿಷ ನೀರಿನಲ್ಲಿಟ್ಟು ಅನಂತರ ಕಿವುಚಿ ಚರಟ ಎಸೆಯಿರಿ. 
  • ಎರಡು ಮೂರು ಲೋಟ ಪ್ರಮಾಣದಷ್ಟು ನೀರಿಗೆ ಹುಳಿ ಸೇರಿಸಿ 
  • ಬೆಲ್ಲ,ಉಪ್ಪು ಸೇರಿಸಿ ಕದಡಿರಿ.
 **ಶೀತ ಪ್ರಕೃತಿಯ ಖಾರ ಪ್ರಿಯರಿಗೆ ತುಸು ಕರಿಮೆಣಸಿನ ಪುಡಿ ಬೆರೆಸಿ ಕೊಡಿ.
 **ಪಿತ್ತಹರವಾದ ಈ ಪಾನಕ,ಪಿತ್ತದ ವಾಂತಿಗೂ ಉಪಶಮನ ಕೊಡುತ್ತದೆ.

ಖರ್ಜೂರ ಪಾನಕ 
 
ಬೇಕಾಗುವ ಸಾಮಗ್ರಿಗಳು  

ಬೀಜ ತೆಗೆದ ಖರ್ಜೂರ ಎರದು ಲೋಟ ಹುಣಸೇ ಹಣ್ಣಿನ ರಸ ಟೀ ಚಮಚ ಉಪ್ಪು ಚಿಟಿಕೆ ಸಿಹಿಗೆ ಸಕ್ಕರೆ 4 ಚಮಚ 

ಮಾಡುವ ವಿಧಾನ 
  • ಖರ್ಜೂರ ನುಣ್ಣಗೆ ರುಬ್ಬಿ 
  • ಹುಣಸೇರಸ ಸೇರಿಸಿ ಚೆನ್ನಾಗಿ ಕಲಕಿ 
  • 2 ಲೋಟ ನೀರಿನೊಂದಿಗೆ ಸಕ್ಕರೆ, ಉಪ್ಪು ಸೆರಿಸಿ ಕಲಸಿ 
  • ಬೇಕಿದ್ದಲ್ಲಿ ಖಾರಕ್ಕೆ ಚಿಟಿಕೆ ಮೆಣಸು ಪುಡಿ ಹಾಕಿ 
  • ಶಕ್ತಿವರ್ಧಕ ಪಾನಕವಿದು

ಮೈಸೂರ್ ಪಾಕ್  

ಬೇಕಾಗುವ ಸಾಮಗ್ರಿಗಳು 

ಎರಡು ಬಟ್ಟಲು ಕಡಲೇಹಿಟ್ಟು, ಕಾಲು ಕಿಲೋ ತುಪ್ಪ, ನೀರು(ಕಾಲು ಲೋಟ), ಸಕ್ಕರೆ ಕಾಲು ಕಿಲೋ

ಮಾಡುವ ವಿಧಾನ
  • ಮೊದಲು ಕಡಲೆ ಹಿಟ್ಟನು ಸ್ವಲ್ಪತುಪ್ಪದಲ್ಲಿ ಘಮಘಮ ವಾಸನೆ ಬರುವವರೆಗೂ ಹುರಿಯಿರಿ
  • ಸಕ್ಕರೆಗೆ ನೀರು ಹಾಕಿ ಗಟ್ಟಿ ಎಳೆಪಾಕ ಬರುವಂತೆ ಕುದಿಸಿ
  • ಪಾಕ ಚೆನ್ನಾಗಿ ಎಳೆ ಬಂದಮೇಲೆ ಒಲೆಯಮೇಲಿದ್ದಾಗಲೇ ಅದಕ್ಕೆ ಹಿಟ್ಟನ್ನು ಸುರಿಯಿರಿ
  • ಉಳಿದತುಪ್ಪವನ್ನು ಒಂದೇಸಮನೆ ಹಾಕುತ್ತಾ ತಿರುವುತ್ತಿರಿ
  • ಮಿಶ್ರಣ ಪಾತ್ರೆಯ ತಳ ಬಿಡುವ ಹೊತ್ತಿಹೆ ತುಪ್ಪ ಸವರಿದ ತಟ್ಟೆಗೆ ಸುರಿಯಿರಿ ಐದು ನಿಮಿಷದ ಬಳಿಕ ಚಾಕುವಿನಿಂದ ಬೇಗಾದ ಆಕಾರಕ್ಕೆ ಕತ್ತರಿಸಿ
  • ನಂತರ ಒಂದು ಕಾಗದದ ಮೇಲೆ ಬೋರಲು ಹಾಕಿ ಮೈಸೂರ್ ಪಾಕ ತಾನಾಗೇ ಬಿಡಿಬಿಡಿಯಾಗಿ ಇದ್ದು ತಿನ್ನಲು ಚೆನ್ನ

ಚಿಸ್ ಪಲಾವ್

ಬೇಕಾಗುವ ಸಾಮಗ್ರಿಗಳು 
ಅಕ್ಕಿ 1 ಲೋಟ ತುಪ್ಪ 100ಗ್ರಾಂ ತುರಿದ ಚೀಸ್ 100ಗ್ರಾಂ ಹಸಿ ಬಟಾಣಿ ಮಸಾಲೆಗೆ:ಲವಂಗ 4,ಮೆಣಸು ಕಾಳು8,ಚಕ್ಕೆ ಪುಡಿ 1ಚಮಚ,ಜೀರಿಗೆ 1ಚಮಚ,ಕೊತ್ತಂಬರಿ ಸೊಪ್ಪು 1 ಕಂತೆ,ತೆಂಗಿನ ತುರಿ 1ಬಟ್ಟಲು,ಉಪ್ಪು2ಚಮಚ 

ಮಾಡುವ ವಿಧಾನ 
  • ಮೊದಲು ಮಸಾಲೆ ಸಾಮಗ್ರಿಗಳನ್ನು ರುಬ್ಬಿಕೊಳ್ಳಿ 
  • ಅಕ್ಕಿಯನ್ನು ತೊಳೆದು ಉದುರುದುರಾಗಿ (ತುಪ್ಪ ಬೆರೆಸಿ) ಅನ್ನ ಮಾಡಿಕೊಳ್ಳಿ, ತಣ್ಣಗಾಗಲು ಬಿಡಿ 
  • ಒಗ್ಗರಣೆಗೆ ತುಪ್ಪ ಹಾಕಿ ಲವಂಗ,ಮೆಣಸಿನ ಕಾಳು,ಚಕ್ಕೆ ಪುಡಿ,ಜೀರಿಗೆ ಹಾಕಿ. 
  • ತಕ್ಷಣ ಅನ್ನ ಹಾಕಿ ಕಲಸಿ,ತಟ್ಟೆಯಲ್ಲಿ ಆರಲು ಹರಡಿ. ಬೆಂದ ಬಟಾಣಿ,ಚೀಸ್ ತುರಿ,ತೆಂಗಿನತುರಿಯನ್ನು ಅನ್ನ ಆರಿದ ಮೇಲೆ ಸೇರಿಸಿ,ಬಡಿಸಿ.

ಬಾಳೆಹಣ್ಣಿನ ಹಲ್ವ

ಬೇಕಾಗುವ ಸಾಮಗ್ರಿಗಳು 
10-12 ಬಾಳೇಹಣ್ಣು, ಒಂದು ಬಟ್ಟಲು ಶುದ್ಧ ತುಪ್ಪ, ಟೀ ಚಮಚ ಏಲಕ್ಕಿ ಪುಡಿ, ಅರ್ಧ ತೆಂಗಿನ ಕಾಯಿ, ಒಂದು ಬಟ್ಟಲು ಸಕ್ಕರೆ 

ಮಾಡುವ ವಿಧಾನ 
  • ಬಾಳೇಹಣ್ಣು ಸಿಪ್ಪೆ ಸುಲಿದು ಚೆನ್ನಾಗಿ ಹಿಸುಕಿರಿ 
  • ಬಾಣಲೆಯಲ್ಲಿ 3ಚಮಚ ತುಪ್ಪ ಕಾಯಿಸಿ ಬಾಳೆಹಣ್ಣನ್ನು ಹಾಕಿ ಗರಿಗರಿಯಾಗುವ ವರೆಗೂ ಬೇಯಿಸಿ 
  • ತೆಂಗಿನ ಕಾಯಿತುರಿ,ಸಕ್ಕರೆ ಸೇರಿಸಿ,ತುಪ್ಪವನ್ನು ಸ್ವಲ್ಪಸ್ವಲ್ಪವಾಗಿ ಸೇರಿಸಿ 
  • ಎಲ್ಲವನ್ನೂ ಕಂದು ಬಣ್ಣ ಬರುವವರೆಗೂ ತಿರುವುತ್ತಿದ್ದು ಸುವಾಸನೆ ಬಂದಮೇಲೆ ಏಲಕ್ಕಿಪುಡಿ ಸೇರಿಸಿ ಒಲೆ ಆರಿಸಿ ಬಿಸಿ ಇರುವಾಗಲೇ ತಿನ್ನಲು ಕೊಡಿ

ಒಂದೆಲಗ(ಬ್ರಾಹ್ಮೀ)ಚಟ್ನಿ(ಮಂಗಳೂರು ಶೈಲಿ)

ಬೇಕಾಗುವ ಸಾಮಗ್ರಿಗಳು 
ಬೇರು ಸಹಿತ ಒಂದೆಲಗದೆಲೆ ಇಪ್ಪತ್ತು, ಕರಿಮೆಣಸು ಎಂಟು, ಕಾಯಿತುರಿ ಒಂದು ಬಟ್ಟಲು,ಮಾವಿನ ಹುಳಿಪುಡಿ ಕಾಲು ಚಮಚ, ಉಪ್ಪು ರುಚಿಗೆ ಮತ್ತು ವಗ್ಗರಣೆಗೆ ಸ್ವಲ್ಪ ಎಣ್ಣೆ, ಕರಿಬೇವು, ಸಾಸಿವೆ, ಒಂದೆರಡು ಕರಿಮೆಣಸು 
ಮಾಡುವ ವಿಧಾನ 
  • ಸೊಪ್ಪನ್ನು ತೊಳೆದು, ಕರಿಮೆಣಸು, ಕಾಯಿತುರಿ, ಮವಿನ ಹಿಳಿ, ಉಪ್ಪು ಹಾಕಿ ನುಣ್ಣಗೆ ರುಬ್ಬಿಕೊಳ್ಳಿ 
  • ಒಗ್ಗರಣೆ ಕೊಡಿ (ಐದೇ ನಿಮಿಷದಲ್ಲಿ ಚಟ್ನಿ ಸಿದ್ಧ)

ಕೊಬ್ಬರಿ ಕುಕ್ಕೀಸ್ 

ಬೇಕಾಗುವ ಸಾಮಗ್ರಿಗಳು 
ಸಕ್ಕರೆ ಪುಡಿ 100 ಗ್ರಾಂ ಬೆಣ್ಣೆ 100 ಗ್ರಾಂ ಮೈದಾ ಹಿಟ್ಟು 150 ಗ್ರಾಂ ಒಣಗಿದ ತೆಂಗಿನ ತುರಿ 60 ಗ್ರಾಂ ಹಾಲಿನ ಪುಡಿ 40 ಗ್ರಾಂ ಬೇಕಿಂಗ್ ಪುಡಿ ಅರ್ಧ ಚಮಚ ನಾಲ್ಕು ಏಲಕ್ಕಿ ಪುಡಿ ವೆನಿಲಾ ಎಸೆನ್ಸ್ ಕಾಲು ಚಮಚ 
ಮಾಡುವ ವಿಧಾನ  
  • ಸಕ್ಕರೆ ಬೆಣ್ಣೆ ನಿಧಾನವಾಗಿ ಕೆನೆಗಟ್ಟಿಸಿ  
  • ಮೈದಾ, ತೆಂಗು,ಹಾಲಿನ ಪುಡಿ, ಬೇಕಿಂಗ್ ಪುಡಿ,ಏಲಕ್ಕಿಪುಡಿ,ಎಸೆನ್ಸ್ ಎಲ್ಲಾ ಸೇರಿಸಿ ಮೃದುವಾಗಿ ಕಲಸಿ  
  • ಹಿಟ್ಟನ್ನು ಸಣ್ಣ ಸಣ್ಣ ಉಂಡೆ ಮಾಡಿಕೊಳ್ಳಿ, ಅಂಗೈ ಮೇಲೆ ಮೆಲ್ಲಗೆ ಚಪ್ಪಟೆಯಾಗಿ ಒತ್ತಿ 
  • ಎಣ್ಣೆ ಸವರಿದ ಬೇಕಿಂಗ್ ಕಾಗದದ ಮೇಲೆ ಅಂತರದಲ್ಲಿ ಪಕ್ಕ ಪಕ್ಕ ಇಡಿ  
  • ಓವನ್ ನಲ್ಲಿ 12 ನಿಮಿಷ 160 ಡಿಗ್ರಿ ಶಾಖದಲ್ಲಿ ಬೇಯಿಸಿ

ಬೇಸನ್ ಲಾಡು

ಬೇಕಾಗುವ ಸಾಮಗ್ರಿಗಳು 
ಅರ್ಧಕಿಲೋ ಕಡಲೇ ಹಿಟ್ಟು ಒಂದು ಬಟ್ಟಲು ತುಪ್ಪ ಎರಡು ಬಟ್ಟಲು ಸಕ್ಕರೆ ಹುರಿಗಡಲೆ ಕಾಲು ಲೋಟ ಹಾಲಿನಪುಡಿ ನಾಲ್ಕು ಚಮಚ ಗೋಡಂಬಿ ದ್ರಾಕ್ಷಿ ನಾಲ್ಕು ಚಮಚ ಸ್ವಲ್ಪ ಹಾಲು 

ಮಾಡುವ ವಿಧಾನ 
  • ಹುರಿಗಡಲೆ,ಸಕ್ಕರೆ,ಹಾಲಿನಪುಡಿ ನುಣ್ಣಗೆ ಪುಡಿ ಮಾಡಿಟ್ಟುಕೊಳ್ಳಿ 
  • ಅಗಲವಾದ ಬಾಣಲೆಯಲ್ಲಿ ತುಪ್ಪಕಾಯಿಸಿ ಅದಕ್ಕೆ ಕಡಲೇ ಹಿಟ್ಟನ್ನು ಘಮವಾಗಿ ಹುರಿದುಕೊಳ್ಳಿ 
  • ಅದಕ್ಕೆ ಪುಡಿ ಮಾಡಿದ ಮಿಶ್ರಣವನ್ನೂ,ಗೋಡಂಬಿ ದ್ರಾಕ್ಷಿ ಯನ್ನೂ ಸೇರಿಸಿ ಇನ್ನೈದು ನಿಮಿಷ ಹುರಿಯಿರಿ 
  • ಒಲೆ ಆರಿದ ನಂತರ ಸ್ವಲ್ಪ ಸ್ವಲ್ಪ ಹಾಲು ಸೇರಿಸಿಕೊಂಡು ಉಂಡೆ ಕಟ್ಟಿರಿ

ರವೆ ಹುಗ್ಗಿ (ಪೊಂಗಲ್) 

ಬೇಕಾಗುವ ಸಾಮಗ್ರಿಗಳು  
ಒಂದು(ಲೋಟ) ಅಳತೆ ರವೆಗೆ ಮುಕ್ಕಾಲು ಅಳತೆ ಹೆಸರು ಬೇಳೆ ಎರಡು ಚಮಚ ಉಪ್ಪು ಒಂದು ಚಮಚ ಮೆಣಸು ಒಂದು ತುಂಡು ಹಸಿ ಶುಂಠಿ ಮೂರು ಚಮಚ ಗೋಡಂಬಿ ಅರ್ಧಲೋಟ ತುಪ್ಪ 

ಮಾಡುವ ವಿಧಾನ 
  • ರವೆ ಮತ್ತು ಹೆಸರುಬೇಳೆಯನ್ನು ಬೇರೆ ಬೇರೆಯಾಗಿ ತುಪ್ಪದಲ್ಲಿ ಹುರಿದುಕೊಳ್ಳಿ 
  • ಉಳಿದ ತುಪ್ಪ ಬಾಣಲೆಗೆ ಹಾಕಿ ಕಾದ ನಂತರ ಗೋಡಂಬಿ,ಮೆಣಸು,ಜೀರಿಗೆ ಶುಂಠಿ ಹಾಕಿ 
  • ಅದು ಸೀದು ಹೋಗುವ ಮೊದಲೇ ನಾಲ್ಕು ಲೋಟ ನೀರು ಸುರಿಯಿರಿ 
  • ಕುದಿಯಲು ಆರಂಭವಾದಾಗ ಉಪ್ಪು ಹಾಕಿ ನಂತರ ಹುರಿದ ರವೆ ಮತ್ತು ಹೆಸರು ಬೇಳೆ ಬೆರೆಸಿ 
  • ಗಟ್ಟಿ ಎನಿಸಿದಲ್ಲಿ ಮತ್ತೊಂದು ಲೋಟ ಬಿಸಿನೀರು ಬೆರೆಸಿ

ಮಾವಿನ ಕಾಯಿ ಚಟ್ನಿ(ಮಂಗಳೂರು ಶೈಲಿ)

ಬೇಕಾಗುವ ಸಾಮಗ್ರಿಗಳು  
ಮಾವಿನಕಾಯಿ ಎರಡು, ಉದ್ದಿನ ಬೇಳೆ ನಾಲ್ಕು ಚಮಚ, ತೆಂಗಿನ ಕಾಯಿ ತುರಿ ಅರ್ಧ ಬಟ್ಟಲು, ಹಸಿ ಮೆಣಸಿನಕಾಯಿ ಆರು  ಮತ್ತು ವಗ್ಗರಣೆಗೆ ಸ್ವಲ್ಪ ಎಣ್ಣೆ, ಕರಿಬೇವು, ಸಾಸಿವೆ, ನಾಲ್ಕೈದು ಒಣಮೆಣಸಿನ ಕಾಯಿ 

ಮಾಡುವ ವಿಧಾನ 
  • ಮಾವಿನ ಕಾಯಿಯ ಸಿಪ್ಪೆ ಮತ್ತು ವಾಟೆ ತೆಗೆದು ತುರಿದಿಡಿ 
  • ಬಾಣಲೆಯಲ್ಲಿ ಎಣ್ಣೆ ಹಾಕಿ, ಕಾದ ಎಣ್ಣೆಗೆ ಉದ್ದನ್ನು ಹಾಕಿ ಹುರುಯಿರಿ, 
  • ಹುರಿದ ಉದ್ದಿನ ಬೇಳೆ ಜೊತೆ ಮಾವಿನ ತುರಿ, ಕಾಯಿ ತುರಿ, ಹಸಿ ಮೆಣಸಿನಕಾಯಿ, ಉಪ್ಪು ಸೇರಿಸಿ ಸಣ್ಣಗೆ ರುಬ್ಬಿಕೊಳ್ಳಿ 
  • ವಗ್ಗರಣೆ ಕೊಡಿ 
  • (ಯಾವ ತಿಂಡಿಯ ಜೊತೆಯಲ್ಲಿ ಬೇಕಾದರೂ ನೆಂಚಿಕೊಳ್ಳಲು ರುಚಿಕರವಾದ ಚಟ್ನಿ ಇದು)

ಹೂರಣದ ಹೋಳಿಗೆ

ಬೇಕಾಗುವ ಸಾಮಗ್ರಿಗಳು  

ಅರ್ಧಕಿಲೋ ಮೈದಾಹಿಟ್ಟು ಅರ್ಧಕಿಲೋ ಕಡಲೇ ಬೇಳೆ ಅರ್ಧಕಿಲೋ ಬೆಲ್ಲ ಹತ್ತು ಯಾಲಕ್ಕಿ ಕಾಲು ಕಿಲೋ ಎಣ್ಣೆ/ತುಪ್ಪ 
ಮಾಡುವ ವಿಧಾನ 
  • ಜರಡಿ ಹಿಡಿದ ಮೈದಾಹಿಟ್ಟಾನ್ನು ಪೂರಿ ಹಿಟ್ಟಿನ ಹದಕ್ಕೆ ಕಲಸಿ,ಚೆನ್ನಾಗಿ ನಾದಿ ಎಣ್ಣೆಯಲ್ಲಿ ಅದ್ದಿಡಿ(ಎರಡರಿಂದ ನಾಲ್ಕು ತಾಸು) 
  • ಕಡಲೆ ಬೇಳೆ ಎರಡುಘಂಟೆ ನೆನೆಸಿ,ನಂತರ ನೀರಿನಲ್ಲಿ ಕುದಿಸಿ ನೀರನ್ನು ಬಸಿದುಕೊಳ್ಳಿ 
  • ಬೆಲ್ಲದ ಪುಡಿ ಬೆರೆಸಿ ಬಾಣಲೆಯಲ್ಲಿ ಬಾಡಿಸಿ,ಬೆಲ್ಲ ಕರಗಿದ ನಂತರ ಆರಿಸಿ,ರುಬ್ಬಿಟ್ಟುಕೊಂಡರೆ ಹೂರಣ ಸಿದ್ಧ 
  • ಮುಂಚೆ ಕಲಸಿದ್ದ ಮೈದಾ ಹಿಟ್ಟನ್ನು ನಿಂಬೆ ಗಾತ್ರದಲ್ಲಿ ತೆಗೆದು ಬಟ್ಟಲಿನಂತೆ ಹಳ್ಳಮಾಡಿ ಹೂರಣ ತುಂಬಿ ಅದೇ ಹಿಟ್ಟಿನಿಂದ ಮುಚ್ಚಿ ಲಟ್ಟಿಸಿ 
  • ಕಾದ ಕಾವಲಿಯ ಮೇಲೆ ತುಪ್ಪ ಬಳಸಿ ಸುಡುವುದು. 
  • ಬಿಸಿಬಿಸಿ ಇದ್ದಾಗಲೇ ಹಾಲು ತುಪ್ಪದೊಡನೆ ತಿನ್ನಲು ಕೊಡಿ

ಬಾಳೆಹಣ್ಣಿನ ಹಲ್ವ 

ಬೇಕಾಗುವ ಸಾಮಗ್ರಿಗಳು 
10-12 ಬಾಳೇಹಣ್ಣು ಒಂದು ಬಟ್ಟಲು ಶುದ್ಧ ತುಪ್ಪ ಟೀ ಚಮಚ ಏಲಕ್ಕಿ ಪುಡಿ ಅರ್ಧ ತೆಂಗಿನ ಕಾಯಿ ಒಂದು ಬಟ್ಟಲು ಸಕ್ಕರೆ 

ಮಾಡುವ ವಿಧಾನ 
  • ಬಾಳೇಹಣ್ಣು ಸಿಪ್ಪೆ ಸುಲಿದು ಚೆನ್ನಾಗಿ ಹಿಸುಕಿರಿ 
  • ಬಾಣಲೆಯಲ್ಲಿ 3ಚಮಚ ತುಪ್ಪ ಕಾಯಿಸಿ ಬಾಳೆಹಣ್ಣನ್ನು ಹಾಕಿ ಗರಿಗರಿಯಾಗುವ ವರೆಗೂ ಬೇಯಿಸಿ 
  • ತೆಂಗಿನ ಕಾಯಿತುರಿ,ಸಕ್ಕರೆ ಸೇರಿಸಿ,ತುಪ್ಪವನ್ನು ಸ್ವಲ್ಪಸ್ವಲ್ಪವಾಗಿ ಸೇರಿಸಿ 
  • ಎಲ್ಲವನ್ನೂ ಕಂದು ಬಣ್ಣ ಬರುವವರೆಗೂ ತಿರುವುತ್ತಿದ್ದು ಸುವಾಸನೆ ಬಂದಮೇಲೆ ಏಲಕ್ಕಿಪುಡಿ ಸೇರಿಸಿ ಒಲೆ ಆರಿಸಿ 
  • ಬಿಸಿ ಇರುವಾಗಲೇ ತಿನ್ನಲು ಕೊಡಿ

ಹೀರೇಕಾಯಿ ಚಟ್ನಿ 

ಬೇಕಾಗುವ ಸಾಮಗ್ರಿಗಳು 
ಹೀರೇಕಾಯಿ ಅರ್ಧ ಕಿಲೋ ಹಸಿ ಮೆಣಸಿನಕಾಯಿ ಹತ್ತು ಉಪ್ಪು ಒಂದು ಟೀ ಚಮಚ ಹುಣಸೇ ಹಣ್ಣು ನಿಂಬೆ ಗಾತ್ರ  ವಗ್ಗರಣೆಗೆ ಸ್ವಲ್ಪ ಎಣ್ಣೆ ಕರಿಬೇವು, ಸಾಸಿವೆ, ಇಂಗು, ಜೀರಿಗೆ  

ಮಾಡುವ ವಿಧಾನ 
ಹೀರೇಕಾಯಿಯನ್ನು ಸಿಪ್ಪೆ ಹೆರೆದು,ಬಲಿತ ಬೀಜಗಳಿದ್ದರೆ ತೆಗೆದು, ಸಣ್ನಕ್ಕೆ ಹೆಚ್ಚಿಕೊಳ್ಳಿ 
ಮಿಕ್ಕಎಲ್ಲಾ ಸಾಮಾನಿನ ಜೊತೆ ಅರ್ಧಲೋಟ ನೀರು ಬೆರೆಸಿ ರುಬ್ಬಿಕೊಳ್ಳಿ  
ಬಾಣಲೆಯಲ್ಲಿ ವಗ್ಗರಣೆ ಹಾಕಿ,ಸಣ್ನಗೆ ಹೆಚ್ಚಿದ ಹೀರೇಕಾಯಿಯನ್ನು ಬಾಡಿಸಿ ನಂತರ ರುಬ್ಬಿದ ಮಿಶ್ರಣವನ್ನೂ ಬೆರೆಸಿ ಎರಡು ನಿಮಿಷ ಬಾಡಿಸಿ 
 (ವಿಷೇಶವೆಂದರೆ ತುರಿದ ಸಿಪ್ಪೆಯಿಂದಲೂ ಚಟ್ನಿ ಮಾಡಿದರೆ ಬಲು ರುಚಿ) 

ಸೊಪ್ಪಿನ ವಡೆ

ಬೇಕಾಗುವ ಸಾಮಗ್ರಿಗಳು 

ಕಡಲೆ ಬೇಳೆ ಒಂದು ಲೋಟ, ತೊಗರಿ ಬೇಳೆ ಕಾಲು ಲೋಟ, ಯಾವುದಾದರೂ ಸೊಪ್ಪು ಅರ್ಧ ಕಟ್ಟು (ಸಣ್ಣಗೆ ಹೆಚ್ಚಿದ್ದು), ಕೊತ್ತಂಬರಿ ಸೊಪ್ಪು, ಕರಿಬೇವು ಸೊಪ್ಪು(ಎರಡು/ನಾಲ್ಕು ಚಮಚ ಹೆಚ್ಚಿದ್ದು), ಸಣ್ಣಗೆ ಹೆಚ್ಚಿದ ಹಸಿಮೆಣಸಿನ ಕಾಯಿ 3-4, ಉಪ್ಪು ರುಚಿಗೆ, ಕರಿಯಲು ಎಣ್ಣೆ 

ಮಾಡುವ ವಿಧಾನ 
  • ಎರಡೂ ಬೇಳೆಗಳನ್ನೂ ಮೂರು ಘಂಟೆ ನೆನೆಸಿಡಿ ನೀರನ್ನು ಬಸಿದು,ಸಾಕಷ್ಟು ಉಪ್ಪು ಸೇರಿಸಿ ಗಟ್ಟಿಯಾಗಿ ರುಬ್ಬಿಕೊಳ್ಳಿ 
  • ಸೊಪ್ಪು,ಕೊತ್ತಂಬರಿ ಕರಿಬೇವು ಮತ್ತು ಹಸಿಮೆಣಸಿನ ಕಾಯಿ ಬೆರೆಸಿ,ನಿಂಬೆ ಗಾತ್ರದ ಸಣ್ಣ ಉಂಡೆಗಳಾಗಿ ಮಾಡಿ 
  • ಉಂಡೆಗಳನ್ನು ಚಪ್ಪಟೆಯಾಗಿ ಮಾಡಿ ಕೆಂಪಗಾಗುವ ವರೆಗೆ ಬಿಸಿ ಎಣ್ಣೆಯಲ್ಲಿ ಕರಿದು ತಿನ್ನಲು ಕೊಡಿ ನೀವೂ ತಿನ್ನಿ
****************************
ಮೈಸೂರು ವಡೆ

ಬೇಕಾಗುವ ಸಾಮಗ್ರಿಗಳು 
ಕಡಲೆ ಬೇಳೆ,ತೊಗರಿ ಬೇಳೆ,ಹೆಸರು ಬೇಳೆ,ಉದ್ದಿನ ಬೇಳೆ (ಪ್ರತಿಯೊಂದೂ 1/2 ಲೋಟ) ಗೋಡಂಬಿ ಮತ್ತು ಕರಬೂಜ ಬೀಜ ಮೂರು ಚಮಚ ಕೊತ್ತಂಬರಿ ಸೊಪ್ಪು ಕರಿಬೇವು ಸೊಪ್ಪು ಹೆಚ್ಚಿದ ಹಸಿಮೆಣಸಿನ ಕಾಯಿ 3-4 ಉಪ್ಪು ರುಚಿಗೆ ಕರಿಯಲು ಎಣ್ಣೆ 

ಮಾಡುವ ವಿಧಾನ
  • ಎಲ್ಲಾ ಬೇಳೆಗಳನ್ನೂ ಮೂರು ಘಂಟೆ ನೆನೆಸಿಡಿ 
  • ನೀರನ್ನು ಬಸಿದು,ಸಾಕಷ್ಟು ಉಪ್ಪು ಸೇರಿಸಿ ಗಟ್ಟಿಯಾಗಿ ರುಬ್ಬಿಕೊಳ್ಳಿ 
  • ಉಳಿದೆಲ್ಲಾ ಸಾಮಾನುಗಳನ್ನೂ ಬೆರೆಸಿ,ನಿಂಬೆ ಗಾತ್ರದ ಸಣ್ಣ ಉಂಡೆಗಳಾಗಿ ಮಾಡಿ 
  • ಉಂಡೆಗಳನ್ನು ಚಪ್ಪಟೆಯಾಗಿ ಮಾಡಿ ಕೆಂಪಗಾಗುವ ವರೆಗೆ ಬಿಸಿ ಎಣ್ಣೆಯಲ್ಲಿ ಕರಿದು ತಿನ್ನಲು ಕೊಡಿ ನೀವೂ ತಿನ್ನಿ

ಮ್ಯಾಂಗೋ ಕರಿ 

ಬೇಕಾಗುವ ಸಾಮಗ್ರಿಗಳು 
ಅರ್ಧ ಮಾಗಿದ 2 ಮಾವಿನ ಹಣ್ಣು, ಕಡಲೇ ಬೀಜ 50ಗ್ರಾಂ, ಗರಂ ಮಸಾಲ 1 ಟೀ ಚಮಚ, ಹೆಚ್ಚಿದ ಹಸಿ ಮೆ.ಕಾಯಿ 2-3, ಕೊತ್ತಂಬರಿ ಒಂದು ಹಿಡಿ ಹೆಚ್ಚಿದ್ದು, ಜಿರಿಗೆ ಅರ್ಧ ಚಮಚ, ಉಪ್ಪು ಒಂದೂವರೆ ಚಮಚ, ಧನಿಯಾ ಮತ್ತು ಕೆಂಪು ಮೆನಸಿನ ಪುಡಿ ಎರಡೆರಡು ಚಮಚ, ಸಕ್ಕರೆ ಎರಡು ಚಮಚ, ಅರಿಶಿನ ೧ ಚಮಚ, ಎಣ್ಣೆ ಅರ್ಧ ಸೌಟು ಇಂಗು ಖರ್ಜೂರ ಹೆಚ್ಚಿದ್ದು 5, ನೀರು ಒಂದು ಲೋಟ 

ಮಾಡುವ ವಿಧಾನ 
  • ಮಧ್ಯಮ ಗಾತ್ರದ ಚೂರನ್ನಾಗಿ ಮಾವಿನ ಹಣ್ಣನ್ನು ಸಿಪ್ಪೆ ತೆಗೆದು ಹೆಚ್ಚಿ 
  • ಕಡಲೆ ಬೀಜ ಹುರಿದು ಅರೆಯಿರಿ 
  • ಬಾಣಲೆ ಕಾದ ನಂತರ ಎಣ್ಣೆ,ಇಂಗು, ಜೀರಿಗೆ ಹಾಕಿ  
  • ಜೀರಿಗೆ ಸಿಡಿಯುವಾಗ ಹ.ಮೆ.ಕಾಯಿ ಮಾವಿನ ಹಣ್ಣು ಸೇರಿಸಿ 
  • ಉಪ್ಪು,ಗರಂ ಮಸಾಲ,ಅರೆದ ಕಡಲೇ ಬೀಜ,ಖರ್ಜೂರ,ಮೆನಸಿನ ಪುಡಿ, ನೀರು,ಸಕ್ಕರೆ ಸೆರಿಸಿ ಮೃದುವಾಗುವ ವರೆಗೂ ಬೇಯಿಸಿ.ಮೂರು ನಿಮಿಶ ಬೇಯಿಸಿ ಒಲೆ ಆರಿಸಿ

ಮಸಾಲೆ ಮಾವಿನ ಭಾತ್

 ಬೇಕಾಗುವ ಸಾಮಗ್ರಿಗಳು 

ರುಬ್ಬಲಿಕ್ಕೆ-ಸಾಸಿವೆ 1 ಚಮಚ,ಜೀರಿಗೆ 1 ಚಮಚ,ಕಾಯಿತುರಿ ಅರ್ಧ ಲೋಟ,ಒನ ಮೆಣಸಿನಕಾಯಿ 8-10,ಉಪ್ಪು ರುಚಿಗೆ,ಅರಿಸಿನ ಅರ್ಧ ಚಮಚ,ಮಾವಿನತುರಿ ಮುಕ್ಕಾಲು ಲೋಟ,ಇಂಗು 1 ಚಿಟಿಕೆ ಇತರೆ:ಎಣ್ಣೆ ಅರ್ಧ ಸೌಟು,ಜೀರಿಗೆ, ಮೆಂತ್ಯಕಾಳು, ಅರಿಸಿನ ಪ್ರತಿಯೊಂದೂ ಅರ್ಧ ಚಮಚ,ಕಡ್ಲೇ ಬೇಳೆ ಉದ್ದು ಎರಡು ಚಮಚ, ಕರಿಬೇವು ಸ್ವಲ್ಪ ಒಣಮೆಣಸಿನ ಕಾಯಿ ಎರಡು, ಕೊತ್ತಂಬರಿ ಅರ್ಧಕಂತೆ,ಅನ್ನ ಒಂದು ಲೋಟ 

ಮಾಡುವ ವಿಧಾನ 
  • ರುಬ್ಬಲು ಹೇಳಿರುವ ಪದಾರ್ಥಗಳನ್ನು ಸೇರಿಸಿ ತರಿತರಿಯಾಗಿ ಪುಡಿಮಾಡಿ ಅಥವಾ ಗಟ್ಟಿಯಾಗಿ ರುಬ್ಬಿಕೊಳ್ಳಿ 
  • ಬಾಣಲೆಯಲ್ಲಿ ಎಣ್ಣೆಗೆ, ಜೀರಿಗೆ,ಮೆಂತ್ಯಕಾಳು,ಕಡ್ಲೇ ಬೇಳೆ ಉದ್ದು ಹಾಕಿ ಬಾಡಿಸಿ 
  • ಕೆಂಪಗಾದ ಮೇಲೆ ಅರಿಸಿನ,ಕರಿಬೇವು,ಒಣಮೆಣಸಿನ ಕಾಯಿ ಚೂರು, ನಂತರ ರುಬ್ಬಿದ ಮಿಶ್ರಣ ಹಾಕಿ ಬಾಡಿಸಿ,ಇಳಿಸಿ 
  • ಅದನ್ನು ಅನ್ನಕ್ಕೆ ಕೊತ್ತಂಬರಿ ಚೂರುಮಾಡಿ ಸೇರಿಸಿ ಕಲಸಿ

ತೆಂಗಿನ ಕಾಯಿ ಹೋಳಿಗೆ 

ಬೇಕಾಗುವ ಸಾಮಗ್ರಿಗಳು 
ಒಂದು ತೆಂಗಿನ ಕಾಯಿ ಒಣ ಕೊಬ್ಬರಿ ಒಂದು ಲೋಟ ಗೋಧಿ ಹಿಟ್ಟು ಅರ್ಧ ಲೋಟ ಮೈದಾ ಹಿಟ್ಟು ಅರ್ಧ ಕಿಲೋ ಯಾಲಕ್ಕಿ 8 ಗಸಗಸೆ 50 ಗ್ರಾಂ ಎಣ್ಣೆ/ತುಪ್ಪ ಕಾಲು ಕಿಲೋ 

ಮಾಡುವ ವಿಧಾನ 
  • ಕಾಯಿ ತುರಿಯನ್ನು ನೀರಿಲ್ಲದೇ ರುಬ್ಬಿ ಬೆಲ್ಲ ಸೇರಿಸಿ ಬಾಣಲೆಯಲ್ಲಿ ಬಾಡಿಸಿ  
  • ಏಲಕ್ಕಿ ಪುಡಿ, ಒಣಕೊಬ್ಬರಿ ಬೆರೆಸಿ ನಿಂಬೆ ಗಾತ್ರದ ಉಂಡೆಗಳನ್ನು ಮಾಡಿಕೊಳ್ಳಿ 
  • ಮೈದಾ ಮತ್ತು ಗೋಧಿ ಹಿಟ್ಟನ್ನು 4/6 ಚಮಚ ಎಣ್ಣೆ ಹಾಕಿ ಹದವಾಗಿ ಕಲಸಿಕೊಳ್ಳಿ 
  • ಹಿಟ್ಟನ್ನು ನಿಂಬೆ ಗಾತ್ರದಲ್ಲಿ ತೆಗೆದು ಬಟ್ಟಲಿನಂತೆ ಹಳ್ಳಮಾಡಿ ಹೂರಣ ತುಂಬಿ ಅದೇ ಹಿಟ್ಟಿನಿಂದ ಮುಚ್ಚಿ ಲಟ್ಟಿಸಿ 
  • ಕಾದ ಕಾವಲಿಯ ಮೇಲೆ ತುಪ್ಪ ಬಳಸಿ ಸುಡುವುದು ಬಿಸಿಬಿಸಿ ಇದ್ದಾಗಲೇ ಹಾಲು ತುಪ್ಪದೊಡನೆ ತಿನ್ನಲು ಕೊಡಿ

ಬದನೆ ಟಿಕ್ಕಾ 

ಬೇಕಾಗುವ ಸಾಮಗ್ರಿಗಳು 

ನಾಲ್ಕು ಬದನೆ ಕ್ಯಾರೆಟ್, ಒಂದು ಬೇಯಿಸಿದ ಆಲೂಗಡ್ಡೆ2 , ಬಿಡಿಸಿದ ಬಟಾಣಿ, ಹುರಳಿ ಕಾಯಿ 50ಗ್ರಾಂ, ಹೆಚ್ಚಿದ 2 ಈರೂಳ್ಳಿ, 1 ಟೊಮಾಟೋ, ಗೋಲಿ ಗಾತ್ರದ ಜಜ್ಜಿದ ಶುಂಠಿ ,ಬೆಳ್ಳುಳ್ಳಿ ಮೂರು ದಳ ಜಜ್ಜಿದ್ದು, ಗರಂ ಮಸಾಲ 1 ಟೀ ಚಮಚ, ಹೆಚ್ಚಿದ ಹಸಿ ಮೆ.ಕಾಯಿ 2-3, ಕೊತ್ತಂಬರಿ ಒಂದು ಹಿಡಿ ಹೆಚ್ಚಿದ್ದು, ಪುದೀನಾ ಹೆಚ್ಚಿದ್ದು ಅರ್ಧ ಕಂತೆ , ಜೀರಿಗೆ ಅರ್ಧ ಚಮಚ, ಉಪ್ಪು ಒಂದೂವರೆ ಚಮಚ, ಧನಿಯಾ ಮತ್ತು ಕೆಂಪು ಮೆನಸಿನ ಪುಡಿ ಎರಡೆರಡು ಚಮಚ, ಎಣ್ಣೆ ಅರ್ಧ ಸೌಟು, 2 ಚಮಚ ನಿಂಬೆ ರಸ,

  ಮಾಡುವ ವಿಧಾನ
  • ಬದನೆಯನ್ನು ಅರ್ಧ ಸೀಳಿ ಉರಿಯಲ್ಲಿ ಅರ್ಧ ಬೇಯಿಸಿ,ತಿರುಳನ್ನು ತೆಗೆದು ಸಿಪ್ಪೆ ಬೆರೆಡೆ ಇಡಿ
  • ಕ್ಯಾರೆಟ್ ಸಣ್ಣ ತುಂಡು ಮಾಡಿ,ಆಲೂಗಡ್ಡೆ ಸಿಪ್ಪೆ ತೆಗೆದು ನಾದಿಕೊಳ್ಳಿ 
  • ಕೊತ್ತಂಬರಿ ಪುದಿನಾ ಅರೆದು ಸ್ವಲ್ಪ ಉಪ್ಪು ಬೆರೆಸಿ
  • ಬಾಣಲೆ ಕಾದ ನಂತರ ಎಣ್ಣೆಗೆ ಜೀರಿಗೆ ಹಾಕಿ
  • ಜೀರಿಗೆ ಸಿಡಿಯುವಾಗ ಈರೂಳ್ಳಿ,ಶುಂಠಿ,ಬೆಳ್ಳುಳ್ಳಿ,ಹ.ಮೆ.ಕಾಯಿ ಸೇರಿಸಿ ಕೆಂಪಗೆ ಹುರಿಯಿರಿ
  •  ಅರಿಶಿನ,ಧನಿಯಾ ಪುದಿ,ಗರಂ.ಮ.ಪುಡಿ ಉಪ್ಪು ಸೇರಿಸಿ ಹುರಿಯಿರಿ
  •  ಆಲೂಗಡ್ಡೆ,ಹುರಳಿಕಾಯಿ,ಕ್ಯಾರೆಟ್,ಬದನೆ ಸಿಪ್ಪೆ ಸೇರಿಸಿ ಚೆನ್ನಾಗಿ ಹುರಿಯಿರಿ 
  • ನಿಂಬೆರಸ ಸೇರಿಸಿ ಉರಿ ಆರಿಸಿ ಕೆಳಗಿಳಿಸಿ
  • ಪ್ರತಿ ಬದನೆಯಲ್ಲಿ ಮಸಾಲೆ ಸೇರಿಸಿ ಉರಿಯಲ್ಲಿ ಗ್ರಿಲ್ ಮಾಡಿ

ಹುಳಿವಡೆ (ಉಡುಪಿ ಶೈಲಿ) 

ಬೇಕಾಗುವ ಸಾಮಗ್ರಿಗಳು 
ಕುಸುಬಲಕ್ಕಿ ಒಂದುಲೋಟ ತುರಿದು ಬೇಯಿಸಿದ ಸಿಹಿಕುಂಬಳ ಕಾಯಿ ಹೋಳು ಒಂದುಲೋಟ ಒಣಮೆಣಸಿನಕಾಯಿ ಹತ್ತು ಹುಣಸೇಹಣ್ಣು ನೆಲ್ಲಿಕಾಯಿ ಗಾತ್ರ ಉಪ್ಪು ಒಂದೂವರೆ ಚಮಚ ಹೆಚ್ಚಿದ ಕೊತ್ತಂಬರಿ ಒಂದು ಕಂತೆ ಕರಿಬೇವಿನೆಲೆ ಎರಡು ಚಮಚ ಕಡಲೇಬೇಳೆ ಎರಡು ಚಮಚ ಅರ್ಧ ಲೀಟರ್ ಎಣ್ಣೆ ಕೆಂಪಗೆ ಕರಿಯಲು ಹಿಂಗಿ ಎರಡು ಚಿಟಿಕೆ 

ಮಾಡುವ ವಿಧಾನ 
  • ಅಕ್ಕಿ ಬೆಚ್ಚಗಿನ ನೀರಿನಲ್ಲಿ ಒಂದು ಘಂಟೆ ನೆನೆಸಿ.ಹಾಗೇ ಕಡಲೇಬೇಳೆಯನ್ನೂ ಬೇರೆ ಬಟ್ಟಲಿನಲ್ಲಿ ನೆನೆಸಿಡಿ 
  • ನೆಂದ ಅಕ್ಕಿಗೆ ಮೆಣಸಿನಕಾಯಿ,ಸಿಹಿಕುಂಬಳ ಕಾಯಿ,ಹುಣಸೆ,ಉಪ್ಪು ನೀರಿಲ್ಲದೇ ನುಣ್ಣಗೆ ರುಬ್ಬಿ 
  • ಅದಕ್ಕೆ ಕಡಲೇಬೇಳೆ,ಕೊತ್ತಂಬರಿ,ಕರಿಬೇವು,ಹಿಂಗು ಸೇರಿಸಿ ಗಟ್ಟಿಯಾಗಿ ಕಲಸಿ 
  • ನಿಂಬೆ ಗಾತ್ರದ ಉಂಡೆಗಳನ್ನಾಗಿ ಮಾಡಿ,ಚಪ್ಪಟೆಯಾಗಿ ಒತ್ತಿ ಕೆಂಪಗೆ ಎಣ್ಣೆಯಲ್ಲಿ ಕರಿಯಿರಿ

ಬನ್ಸ್ 

ಬೇಕಾಗುವ ಸಾಮಗ್ರಿಗಳು 
ಅರ್ಧ ಕಿಲೋ ಮೈದಾಹಿಟ್ಟು ಒಂದು ಲೋಟ ಸಕ್ಕರೆ ನಾಲ್ಕಾರು ಬಾಳೇಹಣ್ಣು ಏಲಕ್ಕಿ ಪುಡಿ ಅರ್ಧ ಚಮಚ ಎಣ್ಣೆ ಕರಿಯಲು 

ಮಾಡುವ ವಿಧಾನ 
  • ಮೈದಾಹಿಟ್ಟಿಗೆ,ಏಲಕ್ಕಿ ಪುಡಿ, ಕಿವಿಚಿದ ಬಾಳೇಹಣ್ಣನ್ನು ಬೆರೆಸಿ ಚಪಾತಿ ಹಿಟ್ಟಿನಂತೆ ಕಲಸಿ(ನೀರು ಬೇಡ) 
  • ಕಲಸುವಾಗ ಒಂದೆರೆಡು ಚಮಚ ಕಾದ ಎಣ್ಣೆ ಬೆರೆಸಿಕೊಂಡರೆ ಬಂನ್ಸ್ ಗರಿ ಗರಿಯಾಗಿರುತ್ತದೆ. 
  • ಎಣ್ಣೆ ಕಾದ ನಂತರ ಪೂರಿಗಿಂತ ಪುಟ್ಟದಾಗಿ ಲಟ್ಟಿಸಿ ಕರೆಯಿರಿ. 
  • ಉಬ್ಬಿ, ಬೆಂದ ಬನ್ಸ್ ಹದಿನೈದು ದಿನಗಳವರೆಗೂ ಫ್ರಿಡ್ಜ್ ಇಲ್ಲದೇ ಇಡಬಹುದು

ಅತಿರಸ 

ಬೇಕಾಗುವ ಸಾಮಗ್ರಿಗಳು 
ಬೆಳ್ತಿಗೆ ಅಕ್ಕಿ ಮೂರು ಲೋಟ ಬೆಲ್ಲ ಮೂರು ಲೋಟ ಕರಿಮೆಣಸಿನ ಪುಡಿ ಮುಕ್ಕಾಲು ಟೀ ಸ್ಪೂನ್ ಗಸಗಸೆ ಮೂರು ಟೀ ಸ್ಪೂನ್ ಎರಡು ಚಿಟಿಕೆ ಉಪ್ಪು ಕರಿಯಲು ಎಣ್ಣೆ 

ಮಾಡುವ ವಿಧಾನ 
  • ಅಕ್ಕಿಯನ್ನು ತೊಳೆದು ಅರ್ಧ ಗಂಟೆ ನೆನೆಸಿ 
  • ನೀರು ಬಸಿದು ನೆರಳಲ್ಲಿ ಒಣಗಿಸಿ, ಕುಟ್ಟಿ ಪುಡಿಮಾಡಿ 
  • ಜರಡಿ ಹಿಡಿದು, ಅದಕ್ಕೆ ಕರಿಮೆಣಸಿನಪುಡಿ ಗಸಗಸೆ ಉಪ್ಪು ಬೆರೆಸಿ 
  • ಬೆಲ್ಲಕ್ಕೆ ಕಾಲು ಲೋಟ ನೀರು ಹಾಕಿ ನೂಲೆಳೆ ಪಾಕ ಮಾಡಿ 
  • ಇದಕ್ಕೆ ಹಿಟ್ಟಿನ ಮಿಶ್ರಣ ಹಾಕಿ ಚೆನ್ನಾಗಿ ಮಗುಚಿ ಕೆಳಗಿಳಿಸಿ 
  • ಆರಿದ ಬಳಿಕ ನಿಂಬೇಗಾತ್ರದ ಉಂಡೆ ಮಾಡಿ ಬೆರಳು ಗಾತ್ರದಷ್ಟು ದಪ್ಪಗೆ ತಟ್ಟಿ ಎಣ್ಣೆಯಲ್ಲಿ ಕರೆಯಿರಿ

ಗೋಡಂಬಿ ಬಿಸ್ಕತ್ತು 

ಬೇಕಾಗುವ ಸಾಮಗ್ರಿಗಳು 
ಸಕ್ಕರೆ ಪುಡಿ 200 ಗ್ರಾಂ ಗೋಡಂಬಿ ಪುಡಿ 100 ಗ್ರಾಂ ಮೈದಾ ಹಿಟ್ಟು 100 ಗ್ರಾಂ ತುಪ್ಪ 100 ಗ್ರಾಂ ಹಾಲಿನ ಪುಡಿ 200 ಗ್ರಾಂ ಹಾಲಿನ ಕೆನೆ (Condensed milk) 

ಮಾಡುವ ವಿಧಾನ 
  • ಅಗಲವಾದ ಬಾಣಲೆಯಲ್ಲಿ ತುಪ್ಪ ಕಾಯಿಸಿ ಒಲೆಯ ಮೇಲಿಂದ ಇಳಿಸಿ, ತಣ್ಣಗಾಗಲು ಬಿಡಿ 
  • ಹಾಲಿನಪುಡಿ,ಕೆನೆ,ಮೈದಾ ಎಲ್ಲಾ ಸೇರಿಸಿ ಮೆತ್ತಗಿನ ಹದಕ್ಕೆ ಕಲಸಿಕೊಳ್ಳಿ 
  • ಆ ಹಿಟ್ಟನ್ನು ಬೆರಳು ಗಾತ್ರ ಅಥವಾ ತೆಳ್ಳಗೆ ಒತ್ತಿ, ಬಿಸ್ಕತ್ ಆಕಾರಕ್ಕೆ ಬಿಲ್ಲೆಗಳಾಗಿ ಕತ್ತರಿಸಿ 
  • ಬೇಕಿಂಗ್ ಕಾಗದದ ಮೇಲೆ ಅಂತರದಲ್ಲಿ ಪಕ್ಕ ಪಕ್ಕ ಇಡಿ 
  • 10-15 ನಿಮಿಷ 160 ಡಿಗ್ರಿ ಶಾಖದಲ್ಲಿ ಬೇಯಿಸಿ, ಬಿಸ್ಕತ್ ತಯಾರಿ  

ರಸದಾರ್ ಗೋಬಿ

ಬೇಕಾಗುವ ಸಾಮಗ್ರಿಗಳು 
ಹೂಕೋಸು ಕಾಲು ಕಿಲೋ ಹೆಚ್ಚಿದ 2 ಈರೂಳ್ಳಿ 2 ಟೊಮಾಟೋ ಗೋಲಿ ಗಾತ್ರದ ಜಜ್ಜಿದ ಶುಂಠಿ ಬೆಳ್ಳುಳ್ಳಿ ಮೂರು ದಳ ಜಜ್ಜಿದ್ದು ಗರಂ ಮಸಾಲ 1 ಟೀ ಚಮಚ ಹೆಚ್ಚಿದ ಹಸಿ ಮೆ.ಕಾಯಿ 2-3 ಕೊತ್ತಂಬರಿ ಒಂದು ಹಿಡಿ ಹೆಚ್ಚಿದ್ದು ಜೀರಿಗೆ ಅರ್ಧ ಚಮಚ ಉಪ್ಪು ಒಂದೂವರೆ ಚಮಚ ಧನಿಯಾ ಮತ್ತು ಕೆಂಪು ಮೆನಸಿನ ಪುಡಿ ಎರಡೆರಡು ಚಮಚ ಎಣ್ಣೆ ಅರ್ಧ ಸೌಟು 

ಮಾಡುವ ವಿಧಾನ 
  • ಹೂಕೋಸನ್ನು ಚಿಕ್ಕಚಿಕ್ಕ ತುಂಡು ಮಾಡಿ ಉಪ್ಪು ನೀರಿನಲ್ಲಿ ನೆನೆಸಿ ಸೊಸಿ  
  • ಬಾಣಲೆ ಕಾದ ನಂತರ ಎಣ್ಣೆಗೆ ಜೀರಿಗೆ ಹಾಕಿ  
  • ಜೀರಿಗೆ ಸಿಡಿಯುವಾಗ ಈರೂಳ್ಳಿ,ಶುಂಠಿ,ಬೆಲ್ಳುಳ್ಳಿ,ಹ.ಮೆ.ಕಾಯಿ ಸೇರಿಸಿ ಕೆಂಪಗೆ ಹುರಿಯಿರಿ. 
  • ಟೊಮಾಟೋ ಸೇರಿಸಿ ೨ ನಿಮಿಶ ಬೇಯಿಸಿ,ನಂತರ ಧನಿಯಾ ಮೆನಸಿನ ಪುಡಿ,ಗರಂ ಮ.ಪುಡಿ ಹೂಕೋಸು ಸೆರಿಸಿ ಕಲಸಿ 
  • ನೀರು ಹಾಕಿ ಬೇಯಿಸಿ,ರೊಟಿ ಅಥವಾ ಪರಾಟ ಜೊತೆ ತಿನ್ನಲು ಚೆನ್ನ
  • ಬಜ್ಜಿಗಳು 

ಬೇಕಾಗುವ ಸಾಮಗ್ರಿಗಳು 
ಅರ್ಧ ಕಿಲೋ ಕಡಲೇ ಹಿಟ್ಟು ನಾಲ್ಕು ಚಮಚ ಅಚ್ಚ ಮೆಣಸಿನ ಪುಡಿ ಚಿಟಿಕೆ ಸೋಡ ಎರಡು ಚಮಚ ಉಪ್ಪು ಒಂದು ಚಮಚ ಜೀರಿಗೆ ಮತ್ತು ಮೆಣಸು ಪುಡಿ ಇಂಗು ಅರ್ಧ ಚಮಚ ಕರಿಯಲು ಎಣ್ಣೆ 

ಮಾಡುವ ವಿಧಾನ 
  • ಮೇಲೆ ತಿಳಿಸಿದ ಎಲ್ಲಾ ಪದಾರ್ಥಗಳನ್ನು ನಿರಿನಲ್ಲಿ ದೋಸೆ ಹಿಟ್ಟಿನ ಹದದಲ್ಲಿ ಕಲಸಿಕೊಳ್ಳಿ 
  • ಎರಡು ಚಮಚ ಚೆನ್ನಾಗಿ ಕಾದ ಎಣ್ಣೆಯನ್ನು ಕಲಸಿದ ಮಿಶ್ರಣಕ್ಕೆ ಬೆರೆಸಿದಲ್ಲಿ ಬಜ್ಜಿ ಗರಿಗರಿ ಯಾಗಿ ಆಗುವುದು. 
  • ಹೀರೇ ಕಾಯಿ,ಪೈನಾಪಲ್,ಈರುಳ್ಳಿ,ಆಲೂಗಡ್ಡೆ,ಸೀಮೆ ಬದನೆಕಾಯಿ,ಬದನೆ ಕಾಯಿ,ಬೂದ ಕುಂಬಳಕಾಯಿ,ಬಾಳೇಕಾಯಿ,ದೊಡ್ದ ಮೆಣಸಿನಕಾಯಿ,ಉದ್ದ ಮೆ.ಕಾಯಿ ಈ ಯಾವುದಾದರೂ ಬಳಸಿ ಬಜ್ಜಿ ಮಾಡಬಹುದು.

ಜೀರಿಗೆ ಪಾನಕ 

ಬೇಕಾಗುವ ಸಾಮಗ್ರಿಗಳು 
ಅಕ್ಕಿ ತೊಳೆದ ನೀರು 3 ಲೋಟ ಕಾಲು ಚಮಚ ಜೀರಿಗೆ ಪುಡಿ ಸಿಹಿಗೆ ಆರು ಕಲ್ಲು ಸಕ್ಕರೆ 

ಮಾಡುವ ವಿಧಾನ 
  • ಅಕ್ಕಿ ತೊಳೆದ ನೀರಿಗೆ ಕಲ್ಲು ಸಕ್ಕರೆ ಬೆರೆಸಿ ಕದಡಿಡಿ. 
  • ಜೀರಿಗೆ ಪುಡಿ ಬೆರೆಸಿ ಮತ್ತೆ ಕದಡಿ ಕುಡಿಯಿರಿ. 
ಅರ್ಧ ಘಂಟೆ ಪಾತ್ರೆಗೆ ಸುತ್ತಲೂ ಒದ್ದೆ ಬಟ್ಟೆ ಸುತ್ತಿಡಲು ಪಾನಕ ತಂಪಾಗಿರುತ್ತದೆ. ಬೇಸಿಗೆಯಲ್ಲಿ ಕಾಡುವ ತಲೆನೋವು ಹಾಗೂ ವಾಂತಿಗೂ ಈ ಪಾನಕ ಶಮನ ನೀಡುತ್ತದೆ.

ರವೆ ಬರ್ಫಿ

ಬೇಕಾಗುವ ಸಾಮಗ್ರಿಗಳು 
ಎರಡು ಬಟ್ಟಲು ಚಿರೋಟಿ ರವೆ(ಸಣ್ಣರವೆ) ಒಂದು ಬಟ್ಟಲು ತುಪ್ಪ ಒಂದು ಬಟ್ಟಲುಹಾಲು ನಾಲ್ಕುಬಟ್ಟಲು ಸಕ್ಕರೆ ಎಂಟು ಏಲಕ್ಕಿ ಕಾಯಿ ಕೇಸರಿ ದಳ ಹತ್ತು 

ಮಾಡುವ ವಿಧಾನ 
  • ರವೆಯನ್ನು ಕೆಂಪಗಾಗದಂತೆ ಹುರಿದು ಅದಕ್ಕೆಹಾಲು,ಸಕ್ಕರೆ,ತುಪ್ಪಹಾಕಿ ಕಲಕುತ್ತಿರಬೇಕು. 
  • ಮಿಶ್ರಣ ಮೈಸೂರುಪಾಕಿನಂತೆ ತಳಬಿಟ್ಟಾಗ ಹಾಲಿನಲ್ಲಿ ನೆನೆಸಿದ ಕೇಸರಿ,ಏಲಕ್ಕಿ ಪುಡಿ ಹಾಕಿ ಸಮನಾಗಿ ಬೆರೆಸಿ. 
  • ತುಪ್ಪಹಚ್ಚಿದ ತಟ್ಟೆಯಲ್ಲಿ ಮಿಷ್ರಣವನ್ನು ಹರಡಿ,ಸ್ವಲ್ಪ ಆರಿದ ಮೇಲೆ ಬೆಲ್ಲೆಗಳಾಗಿ ಕತ್ತರಿಸಿ 
  • ಪೂರ್ತಿ ಆರಿದ ಮೇಲೆ ತೆಗೆದು ತಿನ್ನಬಹುದು

ಮೈಸೂರ್ ಪಾಕ್ 

ಬೇಕಾಗುವ ಸಾಮಗ್ರಿಗಳು 
ಎರಡು ಬಟ್ಟಲು ಕಡಲೇಹಿಟ್ಟು ಕಾಲು ಕಿಲೋ ತುಪ್ಪ ನೀರು(ಕಾಲು ಲೋಟ) ಸಕ್ಕರೆ ಕಾಲು ಕಿಲೋ 

ಮಾಡುವ ವಿಧಾನ 
ಮೊದಲು ಕಡಲೆ ಹಿಟ್ಟನು ಸ್ವಲ್ಪತುಪ್ಪದಲ್ಲಿ ಘಮಘಮ ವಾಸನೆ ಬರುವವರೆಗೂ ಹುರಿಯಿರಿ 
  • ಸಕ್ಕರೆಗೆ ನೀರು ಹಾಕಿ ಗಟ್ಟಿ ಎಳೆಪಾಕ ಬರುವಂತೆ ಕುದಿಸಿ 
  • ಪಾಕ ಚೆನ್ನಾಗಿ ಎಳೆ ಬಂದಮೇಲೆ ಒಲೆಯಮೇಲಿದ್ದಾಗಲೇ ಅದಕ್ಕೆ ಹಿಟ್ಟನ್ನು ಸುರಿಯಿರಿ 
  • ಉಳಿದತುಪ್ಪವನ್ನು ಒಂದೇಸಮನೆ ಹಾಕುತ್ತಾ ತಿರುವುತ್ತಿರಿ 
  • ಮಿಶ್ರಣ ಪಾತ್ರೆಯ ತಳ ಬಿಡುವ ಹೊತ್ತಿಹೆ ತುಪ್ಪ ಸವರಿದ ತಟ್ಟೆಗೆ ಸುರಿಯಿರಿ 
  • ಐದು ನಿಮಿಷದ ಬಳಿಕ ಚಾಕುವಿನಿಂದ ಬೇಗಾದ ಆಕಾರಕ್ಕೆ ಕತ್ತರಿಸಿ  
  • ನಂತರ ಒಂದು ಕಾಗದದ ಮೇಲೆ ಬೋರಲು ಹಾಕಿ ಮೈಸೂರ್ ಪಾಕ ತಾನಾಗೇ ಬಿಡಿಬಿಡಿಯಾಗಿ ಇದ್ದು ತಿನ್ನಲು ಚೆನ್ನ

 ಬನ್ಸ್ (ಮಂಗಳೂರು ಶೈಲಿ)  

ಬೇಕಾಗುವ ಸಾಮಗ್ರಿಗಳು 
ಅರ್ಧ ಕಿಲೋ ಮೈದಾಹಿಟ್ಟು ಒಂದು ಲೋಟ ಸಕ್ಕರೆ ನಾಲ್ಕಾರು ಬಾಳೇಹಣ್ಣು ಏಲಕ್ಕಿ ಪುಡಿ ಅರ್ಧ ಚಮಚ ಎಣ್ಣೆ ಕರಿಯಲು 

ಮಾಡುವ ವಿಧಾನ 
  • ಮೈದಾಹಿಟ್ಟಿಗೆ,ಏಲಕ್ಕಿ ಪುಡಿ, ಕಿವಿಚಿದ ಬಾಳೇಹಣ್ಣನ್ನು ಬೆರೆಸಿ ಚಪಾತಿ ಹಿಟ್ಟಿನಂತೆ ಕಲಸಿ(ನೀರು ಬೇಡ) 
  • ಕಲಸುವಾಗ ಒಂದೆರೆಡು ಚಮಚ ಕಾದ ಎಣ್ಣೆ ಬೆರೆಸಿಕೊಂಡರೆ ಬಂನ್ಸ್ ಗರಿ ಗರಿಯಾಗಿರುತ್ತದೆ. 
  • ಎಣ್ಣೆ ಕಾದ ನಂತರ ಪೂರಿಗಿಂತ ಪುಟ್ಟದಾಗಿ ಲಟ್ಟಿಸಿ ಕರೆಯಿರಿ. 
  • ಉಬ್ಬಿ, ಬೆಂದ  ಬನ್ಸ್  ಹದಿನೈದು ದಿನಗಳವರೆಗೂ ಫ್ರಿಡ್ಜ್ ಇಲ್ಲದೇ ಇಡಬಹುದು

ಮೂಲಂಗಿ ವಡೆ (ಉಡುಪಿ ಶೈಲಿ) 

ಬೇಕಾದ ಸಾಮಾನುಗಳು 
ಮೂಲಂಗಿ ಅರ್ಧ ಕಿಲೋ ಉಪ್ಪು ಒಂದೂವರೆ ಚಮಚ ಅಕ್ಕಿಹಿಟ್ಟು ಅರ್ಧಲೋಟ ಅರ್ಧ ಲೀಟರ್ ಎಣ್ಣೆ ಕೆಂಪಗೆ ಕರಿಯಲು ಹಸಿಮೆಣಸಿನಕಾಯಿ ಹತ್ತು ಹೆಚ್ಚಿದ ಕೊತ್ತಂಬರಿ ಒಂದು ಕಂತೆ 

ಮಾಡುವ ವಿಧಾನ 
  • ಹಸಿಮೆಣಸಿನಕಾಯಿ , ಕೊತ್ತಂಬರಿ ಉಪ್ಪು ಸೇರಿಸಿ ಒರಟಾಗಿ ರುಬ್ಬಿಕೊಳ್ಳಿ 
  • ಮೂಲಂಗಿ ಮೇಲಿನ ಸಿಪ್ಪೆ ತೆಗೆದು ಅತಿ ಸಣ್ಣ ಹೋಳು ಅಥವಾ ದಪ್ಪಗೆ ತುರಿಯಿರಿ 
  • ರುಬ್ಬಿದ ಪದಾರ್ಥ ಮೂಲಂಗಿಗೆ ಅಕ್ಕಿಹಿಟ್ಟು ಸೇರಿಸಿ ಗಟ್ಟಿ ಮುದ್ದೆಯಾಗಿ ಮಾಡಿಕೊಳ್ಳಿ 
  • ತಕ್ಷಣ ಪುಟ್ಟ ಬಿಲ್ಲೆಗಳಾಗಿ ತಟ್ಟಿಕೊಂಡು ಅಥವಾ ಮಣೆಯ ಮೇಲೆ ತಟ್ಟಿಕೊಂಡು ಡಬ್ಬಿ ಮುಚ್ಚಳದಿಂದ ಒತ್ತಿ ಒಂದೇ ಸಮನಾದ ವಡೆಗಳನ್ನು ಮಾಡಿ 
  • ಕೆಂಪಗೆ ಕರೆದು ಕೂಡಲೇ ಖಾರ ಚಟ್ನಿ ಅಥವಾ ಸಾಸ್ ಜೊತೆ ಮೆಲ್ಲಲು ಕೊಡಿ 
  • (ಹಿಟ್ಟು ಕಲಸಿದ ಅರ್ಧಗಂಟೆಯೊಳಗೇ ಮಾಡದಿದ್ದಲ್ಲಿ ಅದು ನೀರು ಬಿಟ್ಟುಕೊಳ್ಳುವ ಸಂಭವ ಉಂಟು) 

ಸೌತೇಕಾಯಿ ಸಿಹಿದೋಸೆ / ಕೆರ್ಕತ್ತಿಗೆ ತೀಪೆದೋಸೆ(ಉಡುಪಿ ಶೈಲಿ)

ಬೇಕಾಗುವ ಸಾಮಗ್ರಿಗಳು  

ಅಕ್ಕಿ ಮೂರುಲೋಟ ಸೌತೇಕಾಯಿತುರಿ ಎರಡು ಲೋಟ ತೆಂಗಿನಕಾಯಿ ತುರಿ ಮುಕ್ಕಾಲು ಲೋಟ ಬೆಲ್ಲದ ಪುಡಿ ಒಂದುಲೋಟ ಉಪ್ಪು ಒಂದು ಚಮಚ 

ಮಾಡುವ ವಿಧಾನ 
  • ಅಕ್ಕಿ ಎರಡು ಘಂಟೆ ನೆನೆಸಿ ತೊಳೆದು ರುಬ್ಬಿ 
  • ರುಬ್ಬುವಾಗ ತರಿತರಿ ಯಾಗಿದ್ದಾಗ ಕಾಯಿ,ಬೆಲ್ಲ,ಉಪ್ಪು ಹಾಕಿ ನುಣ್ಣಗೆ ರುಬ್ಬಿ 
  • ಸೌತೇಕಾಯಿ ತುರಿ ಬೆರೆಸಿ ಕಾದ ಕಾವಲಿಗೆ ಎಣ್ಣೆ ಸವರಿ ದೋಸೆ ಹುಯ್ಯಿರಿ
 
ಸೊಪ್ಪಿನ ವಡೆ

ಬೇಕಾಗುವ ಸಾಮಗ್ರಿಗಳು 
ಕಡಲೆ ಬೇಳೆ ಒಂದು ಲೋಟ, ತೊಗರಿ ಬೇಳೆ ಕಾಲು ಲೋಟ, ಯಾವುದಾದರೂ ಸೊಪ್ಪು ಅರ್ಧ ಕಟ್ಟು, (ಸಣ್ಣಗೆ ಹೆಚ್ಚಿದ್ದು) ಕೊತ್ತಂಬರಿ ಸೊಪ್ಪು, ಕರಿಬೇವು ಸೊಪ್ಪು(ಎರಡು/ನಾಲ್ಕು ಚಮಚ ಹೆಚ್ಚಿದ್ದು) ಸಣ್ಣಗೆ ಹೆಚ್ಚಿದ ಹಸಿಮೆಣಸಿನ ಕಾಯಿ 3-4, ಉಪ್ಪು ರುಚಿಗೆ,  ಕರಿಯಲು ಎಣ್ಣೆ. 

ಮಾಡುವ ವಿಧಾನ 
  • ಎರಡೂ ಬೇಳೆಗಳನ್ನೂ ಮೂರು ಘಂಟೆ ನೆನೆಸಿಡಿ 
  • ನೀರನ್ನು ಬಸಿದು,ಸಾಕಷ್ಟು ಉಪ್ಪು ಸೇರಿಸಿ ಗಟ್ಟಿಯಾಗಿ ರುಬ್ಬಿಕೊಳ್ಳಿ 
  • ಸೊಪ್ಪು,ಕೊತ್ತಂಬರಿ ಕರಿಬೇವು ಮತ್ತು ಹಸಿಮೆಣಸಿನ ಕಾಯಿ ಬೆರೆಸಿ,ನಿಂಬೆ ಗಾತ್ರದ ಸಣ್ಣ ಉಂಡೆಗಳಾಗಿ ಮಾಡಿ 
  • ಉಂಡೆಗಳನ್ನು ಚಪ್ಪಟೆಯಾಗಿ ಮಾಡಿ ಕೆಂಪಗಾಗುವ ವರೆಗೆ ಬಿಸಿ ಎಣ್ಣೆಯಲ್ಲಿ ಕರಿದು ತಿನ್ನಲು ಕೊಡಿ ನೀವೂ ತಿನ್ನಿ

ಧಿಡೀರ್ ರೈಸ್ ಭಾತ್

ಬೇಕಾಗುವ ಸಾಮಗ್ರಿಗಳು 
ಅಕ್ಕಿ1ಪಾವು, ತುಪ್ಪ 50 ಗ್ರಾಂ ಕಡಲೆ ಬೀಜ 2ಚಮಚ, ಕರಿಮೆಣಸು 10, ಚಕ್ಕೆ 1ಚಿಕ್ಕ ತುಂಡು, ಈರುಳ್ಳಿ2, ಸಾಸಿವೆ 1ಚಮಚ, ಉದ್ದಿನಬೇಳೆ 1ಚಮಚ, ಕಡಲೇ ಬೇಳೆ1ಚಮಚ, ಉಪ್ಪು1ಚಮಚ.

ಮಾಡುವ ವಿಧಾನ 
  • ಅಕ್ಕಿಯನ್ನು ತೊಳೆದು ಉದುರುದುರಾಗಿ (ತುಪ್ಪ ಬೆರೆಸಿ) ಅನ್ನ ಮಾಡಿಕೊಳ್ಳಿ, ತಣ್ಣಗಾಗಲು ಬಿಡಿ 
  • ಒಂದು ಬಾಣಲೆಯಲ್ಲಿ ತುಪ್ಪ ಹಾಕಿ ಕಾದನಂತರ ಸಾಸಿವೆ,ಉದ್ದಿನಬೇಳೆ,ಕಡಲೇ ಬೇಳೆ,ಕಡಲೆ ಬೀಜ ಹಾಕಿ ಒಗ್ಗರಣೆ ಮಾಡಿಕೊಳ್ಳಿ 
  • ಈರುಳ್ಳಿಯನ್ನು ಹೆಚ್ಚಿ ಒಗ್ಗರಣೆಗೆ ಹಾಕಿ ಕೆಂಪಗೆ ಹುರಿಯಿರಿ 
  • ಒಂದು ಲೋಟ ನೀರು ಹಾಕಿ ಕುದಿಯುವಾಗ ಚಕ್ಕೆ ಪುಡಿಮಾಡಿ,ಉಪ್ಪು ಹಾಕಿ 
  • ಮೊದಲೇ ತಯಾರಿಸಿದ ಅನ್ನವನ್ನು ಬಾಣಲೆಗೆ ಹಾಕಿ ಕೆದಕಿ.ಒಲೆ ಆರಿಸಿ 
  • ಐದುನಿಮಿಷ ಭದ್ರವಾಗಿ ಮುಚ್ಚಿಡಿ, ಕತ್ತರಿಸಿದ ಕೊತ್ತಂಬರಿ ಬೆರೆಸಿ ಬಡಿಸಿ

ಮೈಸೂರು ವಡೆ

ಬೇಕಾಗುವ ಸಾಮಗ್ರಿಗಳು 
ಕಡಲೆ ಬೇಳೆ,ತೊಗರಿ ಬೇಳೆ,ಹೆಸರು ಬೇಳೆ,ಉದ್ದಿನ ಬೇಳೆ (ಪ್ರತಿಯೊಂದೂ 1/2 ಲೋಟ) 
ಗೋಡಂಬಿ ಮತ್ತು ಕರಬೂಜ ಬೀಜ ಮೂರು ಚಮಚ 
ಕೊತ್ತಂಬರಿ ಸೊಪ್ಪು ಕರಿಬೇವು ಸೊಪ್ಪು 
ಹೆಚ್ಚಿದ ಹಸಿಮೆಣಸಿನ ಕಾಯಿ 3-4 
ಉಪ್ಪು ರುಚಿಗೆ 
ಕರಿಯಲು ಎಣ್ಣೆ 

ಮಾಡುವ ವಿಧಾನ 
  • ಎಲ್ಲಾ ಬೇಳೆಗಳನ್ನೂ ಮೂರು ಘಂಟೆ ನೆನೆಸಿಡಿ 
  • ನೀರನ್ನು ಬಸಿದು,ಸಾಕಷ್ಟು ಉಪ್ಪು ಸೇರಿಸಿ ಗಟ್ಟಿಯಾಗಿ ರುಬ್ಬಿಕೊಳ್ಳಿ 
  • ಉಳಿದೆಲ್ಲಾ ಸಾಮಾನುಗಳನ್ನೂ ಬೆರೆಸಿ,ನಿಂಬೆ ಗಾತ್ರದ ಸಣ್ಣ ಉಂಡೆಗಳಾಗಿ ಮಾಡಿ 
  • ಉಂಡೆಗಳನ್ನು ಚಪ್ಪಟೆಯಾಗಿ ಮಾಡಿ ಕೆಂಪಗಾಗುವ ವರೆಗೆ ಬಿಸಿ ಎಣ್ಣೆಯಲ್ಲಿ ಕರಿದು ತಿನ್ನಲು ಕೊಡಿ ನೀವೂ ತಿನ್ನಿ

ಬಾಳೆ ಹಣ್ಣಿನ ದೋಸೆ

ಬೇಕಾಗುವ ಸಾಮಗ್ರಿಗಳು 

ಅರ್ಧ ಕಿಲೋ ಅಕ್ಕಿ ಏಳು/ಎಂಟು ಬಾಳೇ ಹಣ್ಣು, ಅರ್ಧ ತೆಂಗಿನ ಕಾಯಿ ತುರಿ ಚಿಟಿಕೆ ಉಪ್ಪು ತುಪ್ಪ ಸ್ವಲ್ಪ 

ಮಾಡುವ ವಿಧಾನ 

ಅಕ್ಕಿಯನ್ನು ಮೂರು ಗಂಟೆ ಕಾಲ ನೆನೆಯಲು ಬಿಡಿ 
ಸುಲಿದ ಬಾಳೆ ಹಣ್ಣನ್ನು ಹಿಸುಕಿ(ಕಿವುಚಿ)ಕಾಯಿ ತುರಿ ಬೆರೆಸಿ ಚೆನ್ನಾಗಿ ರುಬ್ಬಿಕೊಳ್ಳಿ 
ಹಿಟ್ಟಿಗೆ ಉಪ್ಪು ಸೇರಿಸಿ ತಾಸು ಬಿಟ್ಟು,ತುಪ್ಪ ಸವರಿದ ತವದಮೇಲೆ ಹುಯ್ಯಿರಿ

ಮೂಲಂಗಿ ವಡೆ (ಉಡುಪಿ ಶೈಲಿ) 

ಬೇಕಾಗುವ ಸಾಮಗ್ರಿಗಳು 

ಮೂಲಂಗಿ ಅರ್ಧ ಕಿಲೋ ಉಪ್ಪು ಒಂದೂವರೆ ಚಮಚ ಅಕ್ಕಿಹಿಟ್ಟು ಅರ್ಧಲೋಟ ಅರ್ಧ ಲೀಟರ್ ಎಣ್ಣೆ ಕೆಂಪಗೆ ಕರಿಯಲು ಹಸಿಮೆಣಸಿನಕಾಯಿ ಹತ್ತು ಹೆಚ್ಚಿದ ಕೊತ್ತಂಬರಿ ಒಂದು ಕಂತೆ 
ಮಾಡುವ ವಿಧಾನ 
  • ಹಸಿಮೆಣಸಿನಕಾಯಿ , ಕೊತ್ತಂಬರಿ ಉಪ್ಪು ಸೇರಿಸಿ ಒರಟಾಗಿ ರುಬ್ಬಿಕೊಳ್ಳಿ 
  • ಮೂಲಂಗಿ ಮೇಲಿನ ಸಿಪ್ಪೆ ತೆಗೆದು ಅತಿ ಸಣ್ಣ ಹೋಳು ಅಥವಾ ದಪ್ಪಗೆ ತುರಿಯಿರಿ 
  • ರುಬ್ಬಿದ ಪದಾರ್ಥ ಮೂಲಂಗಿಗೆ ಅಕ್ಕಿಹಿಟ್ಟು ಸೇರಿಸಿ ಗಟ್ಟಿ ಮುದ್ದೆಯಾಗಿ ಮಾಡಿಕೊಳ್ಳಿ 
  • ತಕ್ಷಣ ಪುಟ್ಟ ಬಿಲ್ಲೆಗಳಾಗಿ ತಟ್ಟಿಕೊಂಡು ಅಥವಾ ಮಣೆಯ ಮೇಲೆ ತಟ್ಟಿಕೊಂಡು ಡಬ್ಬಿ ಮುಚ್ಚಳದಿಂದ ಒತ್ತಿ ಒಂದೇ ಸಮನಾದ ವಡೆಗಳನ್ನು ಮಾಡಿ 
  • ಕೆಂಪಗೆ ಕರೆದು ಕೂಡಲೇ ಖಾರ ಚಟ್ನಿ ಅಥವಾ ಸಾಸ್ ಜೊತೆ ಮೆಲ್ಲಲು ಕೊಡಿ 
(ಹಿಟ್ಟು ಕಲಸಿದ ಅರ್ಧಗಂಟೆಯೊಳಗೇ ಮಾಡದಿದ್ದಲ್ಲಿ ಅದು ನೀರು ಬಿಟ್ಟುಕೊಳ್ಳುವ ಸಂಭವ ಉಂಟು) 

ಮ್ಯಾಂಗೋ ಕರಿ  (ಉತ್ತರ ಭಾರತ ಶೈಲಿ)

ಬೇಕಾಗುವ ಸಾಮಗ್ರಿಗಳು 

ಅರ್ಧ ಮಾಗಿದ 2 ಮಾವಿನ ಹಣ್ಣು, ಕದಲೇ ಬೀಜ 50ಗ್ರಾಂ, ಗರಂ ಮಸಾಲ 1 ಟೀ ಚಮಚ, ಹೆಚ್ಚಿದ ಹಸಿ ಮೆ.ಕಾಯಿ 2-3, ಕೊತ್ತಂಬರಿ ಒಂದು ಹಿಡಿ ಹೆಚ್ಚಿದ್ದು, ಜಿರಿಗೆ ಅರ್ಧ ಚಮಚ, ಉಪ್ಪು ಒಂದೂವರೆ ಚಮಚ, ಧನಿಯಾ ಮತ್ತು ಕೆಂಪು ಮೆನಸಿನ ಪುಡಿ ಎರಡೆರಡು ಚಮಚ, ಸಕ್ಕರೆ ಎರಡು ಚಮಚ, ಅರಿಶಿನ ೧ ಚಮಚ,ಎಣ್ಣೆ ಅರ್ಧ ಸೌಟು, ಇಂಗು, ಖರ್ಜೂರ ಹೆಚ್ಚಿದ್ದು 5, ನೀರು ಒಂದು ಲೋಟ 

ಮಾಡುವ ವಿಧಾನ 
  • ಮಧ್ಯಮ ಗಾತ್ರದ ಚೂರನ್ನಾಗಿ ಮಾವಿನ ಹಣ್ಣನ್ನು ಸಿಪ್ಪೆ ತೆಗೆದು ಹೆಚ್ಚಿ 
  • ಕಡಲೆ ಬೀಜ ಹುರಿದು ಅರೆಯಿರಿ 
  • ಬಾಣಲೆ ಕಾದ ನಂತರ ಎಣ್ಣೆ,ಇಂಗು, ಜೀರಿಗೆ ಹಾಕಿ  
  • ಜೀರಿಗೆ ಸಿಡಿಯುವಾಗ ಹ.ಮೆ.ಕಾಯಿ ಮಾವಿನ ಹಣ್ಣು ಸೇರಿಸಿ 
  • ಉಪ್ಪು,ಗರಂ ಮಸಾಲ,ಅರೆದ ಕಡಲೇ ಬೀಜ,ಖರ್ಜೂರ,ಮೆನಸಿನ ಪುಡಿ, ನೀರು,ಸಕ್ಕರೆ ಸೇರಿಸಿ ಮೃದುವಾಗುವ ವರೆಗೂ ಬೇಯಿಸಿ.ಮೂರು ನಿಮಿಶ ಬೇಯಿಸಿ ಒಲೆ ಆರಿಸಿ

ಅವರೇಕಾಯಿ ಟೊಮೊಟೋ ಭಾತ್

ಬೇಕಾಗುವ ಸಾಮಗ್ರಿಗಳು 
ಅಕ್ಕಿ1ಪಾವು, ಹಸಿ ಅವರೇಕಾಳು1ಪಾವು, ಟೊಮೊಟೋ 5, ಈರುಳ್ಳಿ 3-4 ,ಒಣಮೆಣಸಿನ ಕಾಯಿ 8-10, ಗರಂ ಮಸಾಲ 1ಚಮಚ, ಗಸಗಸೆ 1ಚಮಚ, ಬಿಳಿ ಎಳ್ಳು1ಚಮಚ, ಶುಂಟಿ 2ಗೋಲಿ ಗಾತ್ರ ,ಕೊತ್ತಂಬರಿ ಸೊಪ್ಪು 1ಕಂತೆ, ತೆಂಗಿನ ತುರಿ 1ಬಟ್ಟಲು, ಎಣ್ಣೆ 40 ಗ್ರಾಂ, ಉಪ್ಪು 1-2 ಚಮಚ 

ಮಾಡುವ ವಿಧಾನ 
  • ಮೆಣಸಿನ ಕಾಯಿ,ಎಳ್ಳು,ಗರಂ ಮಸಾಲ ಒಟ್ಟಿಗೆ ಹುರಿದು ನುಣ್ಣಗೆ ರುಬ್ಬಿಕೊಳ್ಳಿ 
  • ಪಾತ್ರೆಯಲ್ಲಿ ಎಣ್ಣೆಹಾಕಿ ಕಾದ ನಂತರ ಹೆಚ್ಚಿದ ಈರುಳ್ಳಿ,ಟೊಮೋಟೊ ಹಾಕಿ ಬಾಡಿಸಿ 
  • ನಂತರ ಅವರೇಕಾಯಿ ಸ್ವಲ್ಪನೀರು ಸೇರಿಸಿ ಕುದಿಸಿ ಬೇಯಿಸಿ 
  • ಅದಕ್ಕೆ ನೆನೆಸಿಟ್ಟ ಅಕ್ಕಿಗೆ ರುಬ್ಬಿದ ಮಸಾಲೆ,ಉಪ್ಪು ಸೇರಿಸಿ ಸುರಿದು ಅಕ್ಕಿ ಬೇಯುವ ವರೆಗೂ ಬೇಯಿಸಿ ಮೇಲೆ ಎರಡು ಚಮಚ ತುಪ್ಪ,ಕೊತ್ತಂಬರಿ ಉದುರಿಸಿ ಬಿಸಿಯಿರುವಾಗಲೇ ತಿನ್ನಲು ಕೊಡಿ  

ಬಾಳೆಹಣ್ಣಿನ ಹಲ್ವ

ಬೇಕಾಗುವ ಸಾಮಗ್ರಿಗಳು  
10-12 ಬಾಳೇಹಣ್ಣು ಒಂದು ಬಟ್ಟಲು ಶುದ್ಧ ತುಪ್ಪ ಟೀ ಚಮಚ ಏಲಕ್ಕಿ ಪುಡಿ ಅರ್ಧ ತೆಂಗಿನ ಕಾಯಿ ಒಂದು ಬಟ್ಟಲು ಸಕ್ಕರೆ 

ಮಾಡುವ ವಿಧಾನ 

  • ಬಾಳೇಹಣ್ಣು ಸಿಪ್ಪೆ ಸುಲಿದು ಚೆನ್ನಾಗಿ ಹಿಸುಕಿರಿ 
  • ಬಾಣಲೆಯಲ್ಲಿ 3ಚಮಚ ತುಪ್ಪ ಕಾಯಿಸಿ ಬಾಳೆಹಣ್ಣನ್ನು ಹಾಕಿ ಗರಿಗರಿಯಾಗುವ ವರೆಗೂ ಬೇಯಿಸಿ 
  • ತೆಂಗಿನ ಕಾಯಿತುರಿ,ಸಕ್ಕರೆ ಸೇರಿಸಿ,ತುಪ್ಪವನ್ನು ಸ್ವಲ್ಪಸ್ವಲ್ಪವಾಗಿ ಸೇರಿಸಿ 
  • ಎಲ್ಲವನ್ನೂ ಕಂದು ಬಣ್ಣ ಬರುವವರೆಗೂ ತಿರುವುತ್ತಿದ್ದು ಸುವಾಸನೆ ಬಂದಮೇಲೆ ಏಲಕ್ಕಿಪುಡಿ ಸೇರಿಸಿ ಒಲೆ ಆರಿಸಿ 
  • ಬಿಸಿ ಇರುವಾಗಲೇ ತಿನ್ನಲು ಕೊಡಿ

ಹಲಸಿನ ವಡೆ/ಪೆಲಕಾಯಿ ವಡೆ (ಉಡುಪಿ ಶೈಲಿ) 

ಬೇಕಾಗುವ ಸಾಮಗ್ರಿಗಳು 
ಹತ್ತು ಹಸಿನತೊಳೆ ಅಕ್ಕಿ ಎರಡುಲೋಟ ಒಣಮೆಣಸಿನ ಕಾಯಿ ಆರು ತೆಂಗಿನ ಕಾಯಿ ತುರಿ ಅರ್ಧ ಲೋಟ ಒಂದು ಚಮಚ ಉಪ್ಪು ವಡೆ ಕರಿಯಲು ಅರ್ಧಲೀಟರ್ ಎಣ್ಣೆ 

ಮಾಡುವ ವಿಧಾನ 
  • ಒಂದುಘಂಟೆ ನೀರಿನಲ್ಲಿ ನೆನೆಸಿದ ಅಕ್ಕಿಯನ್ನು ನೀರು ಬಸಿದು ಇಡಿ 
  • ನೆಂದ ಅಕ್ಕಿ,ಹಲಸು,ಕಾಯಿತುರಿ,ಮೆಣಸಿನಕಾಯಿ,ಉಪ್ಪು ಸೇರಿಸಿ ಗಟ್ಟಿಯಾಗಿ ರುಬ್ಬಿ 
  • ಬಾಣಲೆಯಲ್ಲಿ ಎಣ್ಣೆ ಬಿಸಿಮಾಡಿ ಹಿಟ್ಟನ್ನು ನಿಂಬೆ ಗಾತ್ರದ ಉಂಡೆಗಳನ್ನಾಗಿ ಮಾಡಿ,ಚಪ್ಪಟೆಯಾಗಿ ಒತ್ತಿ ಕೆಂಪಗೆ ಎಣ್ಣೆಯಲ್ಲಿ ಕರಿಯಿರಿ 
  • ಇದು ಬಲು ವಿಷೇಶ ರುಚಿಯ ವಡೆ

ಬದನೆ ಕಾಯಿ ಎಣ್ಣೆಗಾಯಿ

ಬೇಕಾಗುವ ಸಾಮಗ್ರಿಗಳು 
ಅರ್ಧ ಕಿಲೋ ಗುಂಡು ಬದನೇ ಕಾಯಿ ಎಣ್ಣೆ ಒಂದು ಬಟ್ಟಲು ಒಂದು ನಿಂಬೆ ಹಣ್ಣು ಹತ್ತು ಒಣ ಮೆಣಸಿನ ಕಾಯಿ ಕಡ್ಲೇ ಬೇಳೆ ಮತ್ತು ಉದ್ದಿನ ಬೇಳೆ ಎರೆಡೆರೆಡು ಚಮಚ ಓಣ ಕೊಬ್ಬರಿ ತುರಿ ಎರಡು ಚಮಚ ಒಂದು ಚಮಚ ಕೊತ್ತಂಬರಿ ಬೀಜ ಚಕ್ಕೆ,ಮೊಗ್ಗು ಲವಂಗ ಸ್ವಲ್ಪ ಒಂದು ಚಮಚ ಆರಿಶಿನ್ ಮತ್ತು ಸಾಸಿವೆ   

ಮಾಡುವ ವಿಧಾನ 
  • ಒಣ ಮೆಣಸಿನ ಕಾಯಿ,ಕಡ್ಲೇ ಬೇಳೆ ಮತ್ತು ಉದ್ದಿನ ಬೇಳೆ ,ಓಣ ಕೊಬ್ಬರಿ , ಕೊತ್ತಂಬರಿ ಬೀಜ,ಚಕ್ಕೆ,ಮೊಗ್ಗು,ಲವಂಗ ಎಲ್ಲವನ್ನೂ ಪ್ರತ್ಯೇಕ ಹುರಿದು ಪುಡಿ ಮಾಡಿಕೊಳ್ಳಿ 
  • ಪುಡಿಗೆ ಉಪ್ಪು, ಅರಿಸಿನ ಸೇರಿಸಿ ಕಲಸಿ 
  • ಪ್ರತಿಯೊಂದು ಬದನೆ ಕಾಯಿಯನ್ನೂ ತುಂಡಾಗದಂತೆ ನಾಲ್ಕು ಭಾಗ ಸೀಳಿ 
  • ನಡುವೆ ಒಂದೊಂದು ಚಮಚ ಮಸಾಲೆಯನ್ನು ತುಂಬಿಡಿ 
  • ಕಾದ ಎಣ್ಣೆಗೆ ಸಾಸಿವೆ,ಕರಿಬೇವು ಹಾಕಿ ಕಾಯಿಗಳನ್ನು ಅದರಲ್ಲಿ ಸುರಿದು ಎಣ್ಣೆಯಲ್ಲೇ ಬೇಯಿಸಿ 
  • ಹತ್ತು ನಿಮಿಷಗಳ ನಂತರ (ಮೃದುವಾಗಿ ಬೆಂದ ನಂತರ) ಎಣ್ಣೆಗಾಯಿ ಕೆಳಗಿಳಿಸಿ

ಹೂರಣದ ಹೋಳಿಗೆ 

ಬೇಕಾಗುವ ಸಾಮಗ್ರಿಗಳು 
ಅರ್ಧಕಿಲೋ ಮೈದಾಹಿಟ್ಟು ಅರ್ಧಕಿಲೋ ಕಡಲೇ ಬೇಳೆ ಅರ್ಧಕಿಲೋ ಬೆಲ್ಲ ಹತ್ತು ಯಾಲಕ್ಕಿ ಕಾಲು ಕಿಲೋ ಎಣ್ಣೆ/ತುಪ್ಪ 

ಮಾಡುವ ವಿಧಾನ 
  • ಜರಡಿ ಹಿಡಿದ ಮೈದಾಹಿಟ್ಟಾನ್ನು ಪೂರಿ ಹಿಟ್ಟಿನ ಹದಕ್ಕೆ ಕಲಸಿ,ಚೆನ್ನಾಗಿ ನಾದಿ ಎಣ್ಣೆಯಲ್ಲಿ ಅದ್ದಿಡಿ(ಎರಡರಿಂದ ನಾಲ್ಕು ತಾಸು) 
  • ಕಡಲೆ ಬೇಳೆ ಎರಡುಘಂಟೆ ನೆನೆಸಿ,ನಂತರ ನೀರಿನಲ್ಲಿ ಕುದಿಸಿ ನೀರನ್ನು ಬಸಿದುಕೊಳ್ಳಿ 
  • ಬೆಲ್ಲದ ಪುಡಿ ಬೆರೆಸಿ ಬಾಣಲೆಯಲ್ಲಿ ಬಾಡಿಸಿ,ಬೆಲ್ಲ ಕರಗಿದ ನಂತರ ಆರಿಸಿ,ರುಬ್ಬಿಟ್ಟುಕೊಂಡರೆ ಹೂರಣ ಸಿದ್ಧ 
  • ಮುಂಚೆ ಕಲಸಿದ್ದ ಮೈದಾ ಹಿಟ್ಟನ್ನು ನಿಂಬೆ ಗಾತ್ರದಲ್ಲಿ ತೆಗೆದು ಬಟ್ಟಲಿನಂತೆ ಹಳ್ಳಮಾಡಿ ಹೂರಣ ತುಂಬಿ ಅದೇ ಹಿಟ್ಟಿನಿಂದ ಮುಚ್ಚಿ ಲಟ್ಟಿಸಿ ಕಾದ ಕಾವಲಿಯ ಮೇಲೆ ತುಪ್ಪ ಬಳಸಿ ಸುಡುವುದು. ಬಿಸಿಬಿಸಿ ಇದ್ದಾಗಲೇ ಹಾಲು ತುಪ್ಪದೊಡನೆ ತಿನ್ನಲು ಕೊಡಿ
  • ಬಿಸಿಬಿಸಿ ಇದ್ದಾಗಲೇ ಹಾಲು ತುಪ್ಪದೊಡನೆ ತಿನ್ನಲು ಕೊಡಿ

ಹಲಸಿನ ವಡೆ/ಪೆಲಕಾಯಿ ವಡೆ (ಉಡುಪಿ ಶೈಲಿ) 

ಬೇಕಾಗುವ ಸಾಮಗ್ರಿಗಳು

ಹತ್ತು ಹಸಿನತೊಳೆ ಅಕ್ಕಿ ಎರಡುಲೋಟ ಒಣಮೆಣಸಿನ ಕಾಯಿ ಆರು ತೆಂಗಿನ ಕಾಯಿ ತುರಿ ಅರ್ಧ ಲೋಟ ಒಂದು ಚಮಚ ಉಪ್ಪು ವಡೆ ಕರಿಯಲು ಅರ್ಧಲೀಟರ್ ಎಣ್ಣೆ

ಮಾಡುವ ವಿಧಾನ 

  • ಒಂದುಘಂಟೆ ನೀರಿನಲ್ಲಿ ನೆನೆಸಿದ ಅಕ್ಕಿಯನ್ನು ನೀರು ಬಸಿದು ಇಡಿ 
  • ನೆಂದ ಅಕ್ಕಿ,ಹಲಸು,ಕಾಯಿತುರಿ,ಮೆಣಸಿನಕಾಯಿ,ಉಪ್ಪು ಸೇರಿಸಿ ಗಟ್ಟಿಯಾಗಿ ರುಬ್ಬಿ 
  • ಬಾಣಲೆಯಲ್ಲಿ ಎಣ್ಣೆ ಬಿಸಿಮಾಡಿ 
  • ಹಿಟ್ಟನ್ನು ನಿಂಬೆ ಗಾತ್ರದ ಉಂಡೆಗಳನ್ನಾಗಿ ಮಾಡಿ,ಚಪ್ಪಟೆಯಾಗಿ ಒತ್ತಿ ಕೆಂಪಗೆ ಎಣ್ಣೆಯಲ್ಲಿ ಕರಿಯಿರಿ 
  • ಇದು ಬಲು ವಿಷೇಶ ರುಚಿಯ ವಡೆ

ಹುಳಿವಡೆ (ಉಡುಪಿ ಶೈಲಿ)

ಬೇಕಾಗುವ ಸಾಮಗ್ರಿಗಳು

ಕುಸುಬಲಕ್ಕಿ ಒಂದುಲೋಟ, ತುರಿದು ಬೇಯಿಸಿದ ಸಿಹಿಕುಂಬಳ ಕಾಯಿ ಹೋಳು ಒಂದುಲೋಟ, ಒಣಮೆಣಸಿನಕಾಯಿ ಹತ್ತು, ಹುಣಸೇಹಣ್ಣು ನೆಲ್ಲಿಕಾಯಿ ಗಾತ್ರ, ಉಪ್ಪು ಒಂದೂವರೆ ಚಮಚ, ಹೆಚ್ಚಿದ ಕೊತ್ತಂಬರಿ ಒಂದು ಕಂತೆ, 8 ಕರಿಬೇವಿನೆಲೆಕಡಲೇಬೇಳೆ ಎರಡು ಚಮಚ, ಅರ್ಧ ಲೀಟರ್ ಎಣ್ಣೆ(ಕರಿಯಲು),  ಇಂಗು  ಎರಡು ಚಿಟಿಕೆ  

ಮಾಡುವ ವಿಧಾನ
 
  • ಅಕ್ಕಿ ಬೆಚ್ಚಗಿನ ನೀರಿನಲ್ಲಿ ಒಂದು ಘಂಟೆ ನೆನೆಸಿ.ಹಾಗೇ ಕಡಲೇಬೇಳೆಯನ್ನೂ ಬೇರೆ ಬಟ್ಟಲಿನಲ್ಲಿ ನೆನೆಸಿಡಿ
  • ನೆಂದ ಅಕ್ಕಿಗೆ ಮೆಣಸಿನಕಾಯಿ,ಸಿಹಿಕುಂಬಳ ಕಾಯಿ,ಹುಣಸೆ,ಉಪ್ಪು ನೀರಿಲ್ಲದೇ ನುಣ್ಣಗೆ ರುಬ್ಬಿ
  • ಅದಕ್ಕೆ ಕಡಲೇಬೇಳೆ,ಕೊತ್ತಂಬರಿ,ಕರಿಬೇವು,ಹಿಂಗು ಸೇರಿಸಿ ಗಟ್ಟಿಯಾಗಿ ಕಲಸಿ
  • ನಿಂಬೆಗಾತ್ರದಉಂಡೆಗಳನ್ನಾಗಿಮಾಡಿ,ಚಪ್ಪಟೆಯಾಗಿಒತ್ತಿಕೆಂಪಗೆಎಣ್ಣೆಯಲ್ಲಿಕರಿಯಿರಿ

ಹೆಸರುಬೇಳೆ ಸುಕುನುಂಡೆ

ಬೇಕಾಗುವ ಸಾಮಗ್ರಿಗಳು
 
ಹುರಿದ ಹೆಸರುಬೇಳೆ ಒಂದು ಲೋಟ ಬೆಲ್ಲದಪುಡಿ ಒಂದೂವರೆ ಲೋಟ ತೆಂಗಿನ ಕಾಯಿ ತುರಿ ಒಂದು ಲೋಟ ಏಲಕ್ಕಿ ನಾಲ್ಕು ಉಪ್ಪು ಅರ್ಧಚಮಚ ಕರಿಯಲು ಎಣ್ಣೆ

ಮಾಡುವ ವಿಧಾನ

  • ಹೆಸರುಬೇಳೆಯನ್ನು ಹದವಾಗಿ ಬೇಯಿಸಿ,ನೀರು ಬಸೆದು ಬೆಲ್ಲದಪುಡಿ ಬೆರೆಸಿ ಮೊಗಚುತ್ತಿರಿ

  • ಎಳೆಯ ಪಾಕ ಬಂದ ಕೂಡಲೇ ಕಾಯಿತುರಿ ಬೆರೆಸಿ ಏಲಕ್ಕಿಪುಡಿ ಬೆರೆಸಿ ಉಂಡೆ ಮಾಡಿಡಿ

  • ನಂತರ ಎರಡು ಘಂಟೆ ನೆನೆದ ಅಕ್ಕಿಯನ್ನು ಉಪ್ಪು ಬೆರೆಸಿ ದೋಸೆ ಹಿಟ್ಟಿನ ಹದಕ್ಕೆ ರುಬ್ಬಿಕೊಳ್ಳಿ

  • ಬಾಣಲೆಯಲ್ಲಿ ಎಣ್ಣೆ ಕಾಯಿಸಿ ಉಂಡೆಗಳನ್ನು ಹಿಟ್ಟಿನಲ್ಲಿ ಅದ್ದಿ ತಿಳಿ ಕೆಂಪಗೆ ಕರೆಯಿರಿ

ಅವರೇಕಾಳು ಸಾರು

ಬೇಕಾಗುವ ಸಾಮಗ್ರಿಗಳು
ಅರ್ಧ ಕಿಲೋ ಅವರೇಕಾಳು, ತೊಗರಿ ಬೇಳೆ ಕಾಲು ಕಿಲೋ, ಸಾರು ಅಥವಾ ಮೆಣಸಿನ ಪುಡಿ ಎರಡು ಚಮಚ, ಕೊತ್ತಂಬರಿ ಸೊಪ್ಪು ಅರ್ಧ ಕಟ್ಟು, ಕರಿಬೇವು ನಿಂಬೆ ಗಾತ್ರ, ಹುಣಸೇ ಹಣ್ಣು, ತುಪ್ಪ ಅಥವಾ ಎಣ್ಣೆ ಒಂದು ಚಮಚ, ಸಾಸಿವೆ,ಇಂಗು
 
ಮಾಡುವ ವಿಧಾನ
  • ಸಿಪ್ಪೆ ಸುಲಿದ ಅವರೇಕಾಳು, ತೊಗರಿ ಬೇಳೆಯನ್ನು ಪಾತ್ರೆಯೊಂದರಲ್ಲಿ ಅಥವಾ ಕುಕ್ಕರ್ನಲ್ಲಿ ಬೇಯಿಸಿಕೊಳ್ಳಿ
  • ಕುದಿಯುವ ಬೇಳೆಗೆ ಮೆಣಸಿನ ಪುಡಿ, ಕೊತ್ತಂಬರಿ ಸೊಪ್ಪು,ಕರಿಬೇವು ಬಿಡಿಸಿ ಹಾಕಿ
  • ಹುಣಸೇ ರಸ ಬೆರೆಸುವ ಮುನ್ನ ಉಪ್ಪು ಹಾಕಿ ಒಗ್ಗರಣೆ ಸುರಿದು ತಿನ್ನಲು ಬಳಸಿ

ತರಕಾರಿ ಗಟ್ಟಿ ಬಜೆ

ಬಾಳೆಹಣ್ಣಿನ ಹಲ್ವ

Read more at: http://www.sugamakannada.com/recipes/?v=5239
Copyright © www.sugamakannada.com
ಬೇಕಾಗುವ ಸಾಮಗ್ರಿಗಳು
ಸಣ್ಣಗೆ ಹೆಚ್ಚಿದ ಬೆಂಡೇಕಾಯಿ/ಅಲಸಂದೆ ನಾಲ್ಕು ಲೋಟ ಹೆಚ್ಚಿದ ಹಸಿಮೆಣಸಿನಕಾಯಿ ನಾಲ್ಕು ಎರಡು ಚಿಟಿಕೆ ಇಂಗು ಕಡಲೆಹಿಟ್ಟು ಎರಡು/ಮೂರು ಲೋಟ ರುಚಿಗೆ ಉಪ್ಪು ಕರಿಯಲು ಎಣ್ಣೆ

ಮಾಡುವ ವಿಧಾನ
  • ಹೆಚ್ಚಿದ ತರಕಾರಿ, ಹಸಿಮೆಣಸನ್ನು ಉಪ್ಪಿನೊಂದಿಗೆ ಕಲಸಿಟ್ಟುಕೊಳ್ಳಿ.
  • ಇಂಗು ಬೆರೆಸಿ ಕಡಲೆಹಿಟ್ಟನ್ನು ಸ್ವಲ್ಪ ಸ್ವಲ್ಪವಾಗಿ ಉದುರಿಸಿ ನೀರಾಗದಂತೆ ಕಲಸಿ.
  • ಬಾಣಲೆಯಲ್ಲಿ ಬಿಸಿಯಾದ ಎಣ್ಣೆಗೆ ಹಿಟ್ಟು-ತರಕಾರಿ ಮಿಶ್ರಣವನ್ನು ನಿಂಬೇಗಾತ್ರ ಬಿಡಿಬಿಡಿಯಾಗಿ ಎಣ್ಣೆಗೆ ಬಿಡಿ
  • ಕೆಂಪಗಾದ ನಂತರ ತೆಗೆದು, ಆರಿಸಿ ಉಣಬಡಿಸಿ
*** ಬೆಂಡೆ/ಅಲಸಂದೆ ಬದಲು ಹೀರೇಕಾಯಿ/ಬಾಳೇಕಾಯಿ ಸಿಪ್ಪೆ ಉಪಯೋಗಿಸಿ ಗಟ್ಟಿಬಜೆ ಮಾಡಬಹುದು***

ತೆಂಗಿನ ಕಾಯಿ ಬೋಂಡಾ

ಬೇಕಾಗುವ ಸಾಮಗ್ರಿಗಳು 
ಅರ್ಧ ಕಿಲೋ ಮೈದಾಹಿಟ್ಟು, ಅರ್ಧ ಹೋಳು ತೆಂಗಿನ ಕಾಯಿ, ಒಂದು ಟೀ ಚಮಚ ಉಪ್ಪು, ಒಂದು ಟೀ ಚಮಚ ತುಪ್ಪ, ಎರಡು ಕಂತೆ ಕೊತ್ತಂಬರಿ, ಒಂದು ಟೀ ಚಮಚ ಖಾರದ ಪುಡಿ, ಎರಡು ಚಿಟಿಕೆ ಸೋಡಾ, ಕರಿಯಲು ಅರ್ಧ ಕಿಲೋ ಎಣ್ಣೆ

ಮಾಡುವ ವಿಧಾನ 

  • ಶುದ್ಧ ಮಾಡಿದ ಮೈದಾಹಿಟ್ಟಿಗೆ ಚಿಕ್ಕಚಿಕ್ಕ ತೆಂಗಿನ ಕಾಯಿ ಚೂರು,ಸಣ್ಣಗೆ ಹೆಚ್ಚಿದ ಕೊತ್ತಂಬರಿ ಹಾಕಿ, 
  • ಅದೇ ಮಿಶ್ರಣಕ್ಕೆ ಸೋಡಾ,ತುಪ್ಪ,ಉಪ್ಪು,ಖಾರದಪುಡಿ ಎಲ್ಲಾ ಇಡ್ಲಿ ಇಟ್ಟಿನ ಹದದಲ್ಲಿ ನೀರು ಹಾಕಿ ಬೆರೆಸಿ  
  • ಒಲೆಯಮೇಲೆ ಬಾಣಲೆಯಲ್ಲಿ ಸಾಕಷ್ಟು ಎಣ್ಣೆ ಹಾಕಿ,ಕಾದ ಎಣ್ಣೆಯಲ್ಲಿ ಒಂದೊಂದು ಚಮಚದಂತೆ ಬಿಡುತ್ತಾ ಕರಿಯಿರಿ.  

ಬಾಳೆಹಣ್ಣಿನ ಹಲ್ವ

Read more at: http://www.sugamakannada.com/recipes/?v=5239
Copyright © www.sugamakannada.com

ಬೇಕಾಗುವ ಸಾಮಗ್ರಿಗಳು
10-12 ಬಾಳೇಹಣ್ಣು ಒಂದು ಬಟ್ಟಲು ಶುದ್ಧ ತುಪ್ಪ ಟೀ ಚಮಚ ಏಲಕ್ಕಿ ಪುಡಿ ಅರ್ಧ ತೆಂಗಿನ ಕಾಯಿ ಒಂದು ಬಟ್ಟಲು ಸಕ್ಕರೆ
ಮಾಡುವ ವಿಧಾನ
  • ಬಾಳೇಹಣ್ಣು ಸಿಪ್ಪೆ ಸುಲಿದು ಚೆನ್ನಾಗಿ ಹಿಸುಕಿರಿ
  • ಬಾಣಲೆಯಲ್ಲಿ 3ಚಮಚ ತುಪ್ಪ ಕಾಯಿಸಿ ಬಾಳೆಹಣ್ಣನ್ನು ಹಾಕಿ ಗರಿಗರಿಯಾಗುವ ವರೆಗೂ ಬೇಯಿಸಿ
  • ತೆಂಗಿನ ಕಾಯಿತುರಿ,ಸಕ್ಕರೆ ಸೇರಿಸಿ,ತುಪ್ಪವನ್ನು ಸ್ವಲ್ಪಸ್ವಲ್ಪವಾಗಿ ಸೇರಿಸಿ
  • ಎಲ್ಲವನ್ನೂ ಕಂದು ಬಣ್ಣ ಬರುವವರೆಗೂ ತಿರುವುತ್ತಿದ್ದು ಸುವಾಸನೆ ಬಂದಮೇಲೆ ಏಲಕ್ಕಿಪುಡಿ ಸೇರಿಸಿ ಒಲೆ ಆರಿಸಿ
  • ಬಿಸಿ ಇರುವಾಗಲೇ ತಿನ್ನಲು ಕೊಡಿ

ಕೇಸರಿ ಬಾದಾಮ್ ಕುಲ್ಫಿ

ಬೇಕಾಗುವ ಸಾಮಗ್ರಿಗಳು 
ಹಾಲಿನ ಪುಡಿ 50ಗ್ರಾಂ ನೀರು ಅರ್ಧ ಲೀಟರ್ ಜೋಳದಹಿಟ್ಟು 1 ಚಮಚ ಖೋವಾ50 ಗ್ರಾಂ ಕೇಸರಿ 1ಚಿಟಿಕೆ ಹತ್ತು ಬಾದಾಮಿ ಚೂರು ಸಕ್ಕರೆ 75ಗ್ರಾಂ ಐಸ್ ಕ್ರೀಮ್ ಎರಡು ಕಪ್

ಮಾಡುವ ವಿಧಾನ 

  • ನೀರಿನೊಂದಿಗೆ ಹಾಲಿನ ಪುಡಿ ಬೆರೆಸಿ,ಸಕ್ಕರೆ ಕೇಸರಿ ಸೇರಿಸಿ ಹತ್ತು ನಿಮಿಷ ಕುದಿಸಿ 
  • ಖೋವಾ ಮತ್ತು ಬಾದಾಮಿಯನ್ನು ಹಾಕಿ ಮತ್ತೆ ಹತ್ತು ನಿಮಿಷ ಕುದಿಸಿ 
  • ಜೋಳದ ಹಿಟ್ಟನ್ನು ಮೂರು ಚಮಚ ನೀರಿನಲ್ಲಿ ಬೆರೆಸಿ,ಐಸ್ ಕ್ರೀಮ್ ಅನ್ನೂ ಮಿಶ್ರಣಕ್ಕೆ ಸೇರಿಸಿ ಮತ್ತೆ ಹತ್ತು ನಿಮಿಷ ಕುದಿಸಿ 
  • ಒಲೆಯ ಮೇಲಿಂದ ಇಳಿಸಿ ತಣ್ಣಗಾಗಲು ಬಿಡಿ 
  • ಅಗಲವಾದ ಪಾತ್ರೆಗೆ ಹಾಕಿ ಫ್ರಿಡ್ಜ್ ನಲ್ಲಿ ಅರ್ಧಗಂಟೆ ಇಟ್ಟು ಬೇಕಾದ ಅಕಾರಕ್ಕೆ ಕತ್ತರಿಸಿ ಕಡ್ಡಿ ಚುಚ್ಚಿಡಿ 
  • ಮತ್ತೆ ಒಂದು ಗಂಟೆ ಫ್ರಿಡ್ಜ್ ನಲ್ಲಿಟ್ಟು ತಿನ್ನಲು ಕೊಡಿ

ತೆಂಗಿನ ಕಾಯಿ ಹೋಳಿಗೆ
ಬೇಕಾಗುವ ಸಾಮಗ್ರಿಗಳು

ಒಂದು ತೆಂಗಿನ ಕಾಯಿ ಒಣ ಕೊಬ್ಬರಿ ಒಂದು ಲೋಟ ಗೋಧಿ ಹಿಟ್ಟು ಅರ್ಧ ಲೋಟ ಮೈದಾ ಹಿಟ್ಟು ಅರ್ಧ ಕಿಲೋ ಯಾಲಕ್ಕಿ 8 ಗಸಗಸೆ 50 ಗ್ರಾಂ ಎಣ್ಣೆ/ತುಪ್ಪ ಕಾಲು ಕಿಲೋ
ಮಾಡುವ ವಿಧಾನ 

  • ಕಾಯಿ ತುರಿಯನ್ನು ನೀರಿಲ್ಲದೇ ರುಬ್ಬಿ ಬೆಲ್ಲ ಸೇರಿಸಿ ಬಾಣಲೆಯಲ್ಲಿ ಬಾಡಿಸಿ  
  • ಏಲಕ್ಕಿ ಪುಡಿ, ಒಣಕೊಬ್ಬರಿ ಬೆರೆಸಿ ನಿಂಬೆ ಗಾತ್ರದ ಉಂಡೆಗಳನ್ನು ಮಾಡಿಕೊಳ್ಳಿ 
  • ಮೈದಾ ಮತ್ತು ಗೋಧಿ ಹಿಟ್ಟನ್ನು 4/6 ಚಮಚ ಎಣ್ಣೆ ಹಾಕಿ ಹದವಾಗಿ ಕಲಸಿಕೊಳ್ಳಿ 
  • ಹಿಟ್ಟನ್ನು ನಿಂಬೆ ಗಾತ್ರದಲ್ಲಿ ತೆಗೆದು ಬಟ್ಟಲಿನಂತೆ ಹಳ್ಳಮಾಡಿ ಹೂರಣ ತುಂಬಿ ಅದೇ ಹಿಟ್ಟಿನಿಂದ ಮುಚ್ಚಿ ಲಟ್ಟಿಸಿ 
  • ಕಾದ ಕಾವಲಿಯ ಮೇಲೆ ತುಪ್ಪ ಬಳಸಿ ಸುಡುವುದು ಬಿಸಿಬಿಸಿ ಇದ್ದಾಗಲೇ ಹಾಲು ತುಪ್ಪದೊಡನೆ ತಿನ್ನಲು ಕೊಡಿ

ಮಸಾಲೆ ಮಾವಿನ ಭಾತ್
ಬೇಕಾಗುವ ಸಾಮಗ್ರಿಗಳು 

ರುಬ್ಬಲಿಕ್ಕೆ-ಸಾಸಿವೆ 1 ಚಮಚ,ಜೀರಿಗೆ 1 ಚಮಚ,ಕಾಯಿತುರಿ ಅರ್ಧ ಲೋಟ,ಒನ ಮೆಣಸಿನಕಾಯಿ 8-10,ಉಪ್ಪು ರುಚಿಗೆ,ಅರಿಸಿನ ಅರ್ಧ ಚಮಚ,ಮಾವಿನತುರಿ ಮುಕ್ಕಾಲು ಲೋಟ,ಇಂಗು 1 ಚಿಟಿಕೆ ಇತರೆ:ಎಣ್ಣೆ ಅರ್ಧ ಸೌಟು,ಜೀರಿಗೆ, ಮೆಂತ್ಯಕಾಳು, ಅರಿಸಿನ ಪ್ರತಿಯೊಂದೂ ಅರ್ಧ ಚಮಚ,ಕಡ್ಲೇ ಬೇಳೆ ಉದ್ದು ಎರಡು ಚಮಚ, ಕರಿಬೇವು ಸ್ವಲ್ಪ ಒಣಮೆಣಸಿನ ಕಾಯಿ ಎರಡು, ಕೊತ್ತಂಬರಿ ಅರ್ಧಕಂತೆ,ಅನ್ನ ಒಂದು ಲೋಟ ಅಕ್ಕಿಯದು

ಮಾಡುವ ವಿಧಾನ

  • ರುಬ್ಬಲು ಹೇಳಿರುವ ಪದಾರ್ಥಗಳನ್ನು ಸೇರಿಸಿ ತರಿತರಿಯಾಗಿ ಪುಡಿಮಾಡಿ ಅಥವಾ ಗಟ್ಟಿಯಾಗಿ ರುಬ್ಬಿಕೊಳ್ಳಿ
  • ಬಾಣಲೆಯಲ್ಲಿ ಎಣ್ಣೆಗೆ, ಜೀರಿಗೆ,ಮೆಂತ್ಯಕಾಳು,ಕಡ್ಲೇ ಬೇಳೆ ಉದ್ದು ಹಾಕಿ ಬಾಡಿಸಿ
  • ಕೆಂಪಗಾದ ಮೇಲೆ ಅರಿಸಿನ,ಕರಿಬೇವು,ಒಣಮೆಣಸಿನ ಕಾಯಿ ಚೂರು, ನಂತರ ರುಬ್ಬಿದ ಮಿಶ್ರಣ ಹಾಕಿ ಬಾಡಿಸಿ,ಇಳಿಸಿ
  • ಅದನ್ನು ಅನ್ನಕ್ಕೆ ಕೊತ್ತಂಬರಿ ಚೂರುಮಾಡಿ ಸೇರಿಸಿ ಕಲಸಿ

ಟೊಮಾಟೊ ಚಟ್ನಿ 
ಬೇಕಾಗುವ ಸಾಮಗ್ರಿಗಳು
ಟೊಮೆಟೊ ಅರ್ಧ ಕಿಲೋ ಬೆಲ್ಲ ಒಂದು ಬಟ್ತಲು ಎರಡು ಚಮಚ ಖಾರದ ಮೆಣಸಿನ ಪುಡಿ ಉಪ್ಪು ಒಂದು ಟೀ ಚಮಚ ವಗ್ಗರಣೆಗೆ ಸ್ವಲ್ಪ ಎಣ್ಣೆ ಕರಿಬೇವು ಸಾಸಿವೆ ಇಂಗು ಅರಿಸಿನ
ಮಾಡುವ ವಿಧಾನ 

  • ಟೊಮೆಟೊಗಳನ್ನು ತೊಳೆದು ಸಣ್ಣಗೆ ಕತ್ತರಿಸಿಕೊಳ್ಳಿ
  • ಬಾಣಲೆಯಲ್ಲಿ ಎಣ್ಣೆ ಕಾಯಿಸಿ ವಗ್ಗರಣೆ ಹಾಕಿ ಟೊಮೆಟೊ ಸೇರಿಸಿ ಐದು ನಿಮಿಷ ಬೇಯಿಸಿ
  • ಬೆಲ್ಲ, ಅರಿಸಿನ, ಮೆಣಸಿನ ಪುಡಿ, ಉಪ್ಪು ಸೇರಿಸಿ ಬಾಡಿಸಿ
  • ಬಾಣಲೆ ಮುಚ್ಚಿ ಸಣ್ಣ ಕಾವಿನಲ್ಲಿ ಟೊಮೆಟೊ ಮೃದುವಾಗುವ ವರೆಗೆ ಬೇಯಿಸಿ
  • ಗಟ್ಟಿಗಾದ ಮೇಲೆ ಕೆಳಗಿಳಿಸಿ

ಮಾವಿನ ಕಾಯಿ ಚಟ್ನಿ (ಮಂಗಳೂರು ಶೈಲಿ)
ಬೇಕಾಗುವ ಸಾಮಗ್ರಿಗಳು
ಮಾವಿನಕಾಯಿ ಎರಡು ಉದ್ದಿನ ಬೇಳೆ ನಾಲ್ಕು ಚಮಚ ತೆಂಗಿನ ಕಾಯಿ ತುರಿ ಅರ್ಧ ಬಟ್ಟಲಿ ಹಸಿ ಮೆಣಸಿನಕಾಯಿ ಆರು  ಮತ್ತು ವಗ್ಗರಣೆಗೆ ಸ್ವಲ್ಪ ಎಣ್ಣೆ ಕರಿಬೇವು ಸಾಸಿವೆ ಒಣಮೆಣಸಿನ ಕಾಯಿ ನಾಲ್ಕೈದು
ಮಾಡುವ ವಿಧಾನ 

  • ಮಾವಿನ ಕಾಯಿ ಸಿಪ್ಪೆ, ವಾಟೆ ತೆಗೆದು ತುರಿದಿಡಿ
  • ಬಾಣಲೆಯಲ್ಲಿ ಎಣ್ಣೆ ಹಾಕಿ, ಕಾದ ಎಣ್ಣೆಗೆ ಉದ್ದನ್ನು ಹಾಕಿ ಹುರುಯಿರಿ,
  • ಹುರಿದ ಉದ್ದಿನ ಬೇಳೆ ಜೊತೆ ಮಾವಿನ ತುರಿ, ಕಾಯಿ ತುರಿ, ಹಸಿ ಮೆಣಸಿನಕಾಯಿ, ಉಪ್ಪು ಸೇರಿಸಿ ಸಣ್ಣಗೆ ರುಬ್ಬಿಕೊಳ್ಳಿ
  • ವಗ್ಗರಣೆ ಕೊಡಿ
  • (ಯಾವ ತಿಂಡಿಯ ಜೊತೆಯಲ್ಲಿ ಬೇಕಾದರೂ ನೆಂಚಿಕೊಳ್ಳಲು ರುಚಿಕರವಾದ ಚಟ್ನಿ ಇದು)

ಬೂದ ಕುಂಬಳಕಾಯಿ ಹಲ್ವ 
ಬೇಕಾಗುವ ಸಾಮಗ್ರಿಗಳು 
ಭಾರವಾದ ಅರ್ಧ ಬೂದಕುಂಬಳಕಾಯಿ ಮುಕ್ಕಾಲು ಕೇಜಿ ಸಕ್ಕರೆ ಅರ್ಧ ಲೀಟರ್ ಹಾಲು ಹದಿನೈದು ಏಲಕ್ಕಿ

ಮಾಡುವ ವಿಧಾನ 

  • ಬೂದಕುಂಬಳಕಾಯಿಯ ಸಿಪ್ಪೆ ಹಾಗೂ ತಿರುಳನ್ನು ತೆಗೆದು ಚಿಕ್ಕ ಹೋಳುಗಳನ್ನಾಗಿ ಮಾಡಿ ತೊಳೆದಿಟ್ಟುಕೊಳ್ಳಿ
  • ತೊಳೆದ ಹೋಳನ್ನು ಡಬರಿಯಲ್ಲಿ ಹಾಕಿ ಒಲೆಯ ಮೇಲಿಟ್ಟು ಹಾಲು ಹಾಕಿ ಹದವಾಗಿ ಬೇಯಿಸಿ.
  • ಹೋಳು ಬೆಂದಮೇಲೆ ಸಕ್ಕರೆ ಹಾಕಿ ಕೆದಕುತ್ತಿರಿ.
  • ನೀರು ಕಡಿಮೆಯಾಗಿ ಗಟ್ಟಿ ಪಾಕವಾಗುತ್ತಿದ್ದಂತೆ ಏಲಕ್ಕಿ ಪುಡಿ ಬೆರೆಸಿ,ಒಲೆಯ ಮೇಲಿಂದ ಇಳಿಸಿ

ಬೇಳೆ ಬೋಂಡಾ
ಬೇಕಾಗುವ ಸಾಮಗ್ರಿಗಳು 

ಅರ್ಧ ಕಿಲೋ ತೊಗರೀ ಬೇಳೆ, ಒಂದು ಲೋಟ ಕಡಲೇ ಬೇಳೆ, ಒಂದು ಲೋಟ ಉದ್ದಿನ ಬೇಳೆ, ಹನ್ನೆರಡು ಹ.ಮೆ.ಕಾಯಿ, ಒಂದು ಚೂರು ಶುಂಠಿ, ಎರಡು ಕಂತೆ ಕೊತ್ತಂಬರಿ, ಒಂದು ಕಂತೆ ಪುದೀನಾ ಸೊಪ್ಪು, ಒಂದು ಚಮಚ ಉಪ್ಪು, ಚಿಟಿಕೆ ಇಂಗು, ಕರಿಯಲು ಅರ್ಧ ಕಿಲೋ ಎಣ್ಣೆ.
ಮಾಡುವ ವಿಧಾನ

  • ಎಲ್ಲಾ ಬೇಳೆಗಳನ್ನು ನಾಲ್ಕು ಘಂಟೆ ನೀರಿನಲ್ಲಿ ನೆನೆಸಿ 
  • ನೆನೆದ ಬೇಳೆಗೆ ಇಂಗು,ಹ.ಮೆ.ಕಾಯಿ,ಶುಂಠಿ,ಉಪ್ಪು ಹಾಕಿ ತರಿತರಿಯಾಗಿ ರುಬ್ಬಿಕೊಳ್ಳಿ  
  • ರುಬ್ಬಿದ ಹಿಟ್ಟಿಗೆ ಕೊತ್ತಂಬರಿ,ಪುದೀನಾ ಸಣ್ನಗೆ ಹೆಚ್ಚಿ ಕಲಸಿ 
  • ಒಲೆಯಮೇಲೆ ಬಾಣಲೆಯಲ್ಲಿ ಸಾಕಷ್ಟು ಎಣ್ಣೆ ಹಾಕಿ,ಕಾದ ಎಣ್ಣೆಯಲ್ಲಿ ವಡೆ ಅಥವಾ ಬೋಂಡದ ಆಕಾರದಲ್ಲಿ ತಟ್ಟಿ/ಕಟ್ಟಿ ಕರಿಯುವುದು

ಚೀಸ್ ಪಲಾವ್ 

ಬೇಕಾಗುವ ಸಾಮಗ್ರಿಗಳು 

ಅಕ್ಕಿ 1 ಲೋಟ ತುಪ್ಪ 100ಗ್ರಾಂ ತುರಿದ ಚೀಸ್ 100ಗ್ರಾಂ ಹಸಿ ಬಟಾಣಿ
ಮಸಾಲೆಗೆ:ಲವಂಗ 4,ಮೆಣಸು ಕಾಳು8,ಚಕ್ಕೆ ಪುಡಿ
1ಚಮಚ,ಜೀರಿಗೆ 1ಚಮಚ,ಕೊತ್ತಂಬರಿ ಸೊಪ್ಪು 1 ಕಂತೆ,ತೆಂಗಿನ ತುರಿ 1 ಬಟ್ಟಲು,ಉಪ್ಪು2 ಚಮಚ
ಮಾಡುವ ವಿಧಾನ 

  • ಮೊದಲು ಮಸಾಲೆ ಸಾಮಗ್ರಿಗಳನ್ನು ರುಬ್ಬಿಕೊಳ್ಳಿ 
  • ಅಕ್ಕಿಯನ್ನು ತೊಳೆದು ಉದುರುದುರಾಗಿ (ತುಪ್ಪ ಬೆರೆಸಿ) ಅನ್ನ ಮಾಡಿಕೊಳ್ಳಿ, 
  • ತಣ್ಣಗಾಗಲು ಬಿಡಿ ಒಗ್ಗರಣೆಗೆ ತುಪ್ಪ ಹಾಕಿ 
  • ಲವಂಗ,ಮೆಣಸಿನ ಕಾಳು,ಚಕ್ಕೆ ಪುಡಿ,ಜೀರಿಗೆ ಹಾಕಿ. ತಕ್ಷಣ ಅನ್ನ ಹಾಕಿ ಕಲಸಿ,ತಟ್ಟೆಯಲ್ಲಿ ಆರಲು ಹರಡಿ. 
  • ಬೆಂದ ಬಟಾಣಿ,ಚೀ
    ಸ್ ತುರಿ,ತೆಂಗಿನತುರಿಯನ್ನು ಅನ್ನ ಆರಿದ ಮೇಲೆ ಸೇರಿಸಿ,ಬಡಿಸಿ.

ರವೆ ಹುಗ್ಗಿ (ಪೊಂಗಲ್)

ಬೇಕಾಗುವ ಸಾಮಗ್ರಿಗಳು 
ಒಂದು(ಲೋಟ) ಅಳತೆ ರವೆಗೆ ಮುಕ್ಕಾಲು ಅಳತೆ ಹೆಸರು ಬೇಳೆ ಎರಡು ಚಮಚ ಉಪ್ಪು ಒಂದು ಚಮಚ ಮೆಣಸು ಒಂದು ತುಂಡು ಹಸಿ ಶುಂಠಿ ಮೂರು ಚಮಚ ಗೋಡಂಬಿ ಅರ್ಧಲೋಟ ತುಪ್ಪ
ಮಾಡುವ ವಿಧಾನ 

  • ರವೆ ಮತ್ತು ಹೆಸರುಬೇಳೆಯನ್ನು ಬೇರೆ ಬೇರೆಯಾಗಿ ತುಪ್ಪದಲ್ಲಿ ಹುರಿದುಕೊಳ್ಳಿ 
  • ಉಳಿದ ತುಪ್ಪ ಬಾಣಲೆಗೆ ಹಾಕಿ ಕಾದ ನಂತರ ಗೋಡಂಬಿ,ಮೆಣಸು,ಜೀರಿಗೆ ಶುಂಠಿ ಹಾಕಿ 
  • ಅದು ಸೀದು ಹೋಗುವ ಮೊದಲೇ ನಾಲ್ಕು ಲೋಟ ನೀರು ಸುರಿಯಿರಿ 
  • ಕುದಿಯಲು ಆರಂಭವಾದಾಗ ಉಪ್ಪು ಹಾಕಿ ನಂತರ ಹುರಿದ ರವೆ ಮತ್ತು ಹೆಸರು ಬೇಳೆ ಬೆರೆಸಿ 
  • ಗಟ್ಟಿ ಎನಿಸಿದಲ್ಲಿ ಮತ್ತೊಂದು ಲೋಟ ಬಿಸಿನೀರು ಬೆರೆಸಿ

ರವೆ ಹೋಳಿಗೆ 
ಬೇಕಾಗುವ ಸಾಮಗ್ರಿಗಳು  
ಒಂದು ಕಿಲೋ ಮೈದಾಹಿಟ್ಟು ,ಒಂದು ಕಿಲೋ ಸಕ್ಕರೆ,ಅರ್ಧಕಿಲೋ ಸಣ್ಣರವೆ,ಯಾಲಕ್ಕಿ 10 ,ಕಾಲು ಕಿಲೋ ತುಪ್ಪ ,ಅರ್ಧ ಬಟ್ಟಲು ಎಣ್ಣೆ 
ಮಾಡುವ ವಿಧಾನ 
  • ಬಾಣಲೆಯಲ್ಲಿ ರವೆಯನ್ನು ಘಂ ಎಂದು ವಾಸನೆ ಬರುವವರೆಗೂ ಹುರಿದು ಅದಕ್ಕೆ ಎರಡರಷ್ಟು ನೀರು ಹಾಕಿ ಬೇಯಿಸಿ 
  • ಸಕ್ಕರೆ ಸ್ವಲ್ಪ ತುಪ್ಪ ಬೆರೆಸಿ ಬಾಡಿಸಿ ಆರಿದ ರವೆಮಿಶ್ರಣಕ್ಕೆ ಯಾಲಕ್ಕಿ ಪುಡಿ ಬೆರೆಸಿ ನಿಂಬೆ ಗಾತ್ರದ ಉಂಡೆಗಳನ್ನು ಮಾಡಿಕೊಳ್ಳಿ(ಹೂರಣ) 
  • ಮೈದಾಹಿಟ್ಟನ್ನು ಪೂರಿ ಹಿಟ್ಟಿನಂತೆ ಚೆನ್ನಾಗಿ ಕಲಸಿ ನಾದಿರಿ  
  • ಹಿಟ್ಟನ್ನು ನಿಂಬೆ ಗಾತ್ರದಲ್ಲಿ ತೆಗೆದು ಬಟ್ಟಲಿನಂತೆ ಹಳ್ಳಮಾಡಿ ಹೂರಣ ತುಂಬಿ ಅದೇ ಹಿಟ್ಟಿನಿಂದ ಮುಚ್ಚಿ ಲಟ್ಟಿಸಿ
  • ಕಾದ ಕಾವಲಿಯ ಮೇಲೆ ತುಪ್ಪ ಬಳಸಿ ಸುಡುವುದು. 
  • ಬಿಸಿಬಿಸಿ ಇದ್ದಾಗಲೇ ಹಾಲು ತುಪ್ಪದೊಡನೆ ತಿನ್ನಲು ಕೊಡಿ

ಹೂರಣದ ಹೋಳಿಗೆ 
ಬೇಕಾಗುವ ಸಾಮಗ್ರಿಗಳು 
ಅರ್ಧಕಿಲೋ ಮೈದಾಹಿಟ್ಟು, ಅರ್ಧಕಿಲೋ ಕಡಲೇ ಬೇಳೆ, ಅರ್ಧಕಿಲೋ ಬೆಲ್ಲ, ಹತ್ತು ಯಾಲಕ್ಕಿ, ಕಾಲು ಕಿಲೋ ಎಣ್ಣೆ/ತುಪ್ಪ
ಮಾಡುವ ವಿಧಾನ

  • ಜರಡಿ ಹಿಡಿದ ಮೈದಾಹಿಟ್ಟಾನ್ನು ಪೂರಿ ಹಿಟ್ಟಿನ ಹದಕ್ಕೆ ಕಲಸಿ,ಚೆನ್ನಾಗಿ ನಾದಿ ಎಣ್ಣೆಯಲ್ಲಿ ಅದ್ದಿಡಿ(ಎರಡರಿಂದ ನಾಲ್ಕು ತಾಸು) 
  • ಕಡಲೆ ಬೇಳೆ ಎರಡುಘಂಟೆ ನೆನೆಸಿ,ನಂತರ ನೀರಿನಲ್ಲಿ ಕುದಿಸಿ ನೀರನ್ನು ಬಸಿದುಕೊಳ್ಳಿ 
  • ಬೆಲ್ಲದ ಪುಡಿ ಬೆರೆಸಿ ಬಾಣಲೆಯಲ್ಲಿ ಬಾಡಿಸಿ,ಬೆಲ್ಲ ಕರಗಿದ ನಂತರ ಆರಿಸಿ,ರುಬ್ಬಿಟ್ಟುಕೊಂಡರೆ ಹೂರಣ ಸಿದ್ಧ 
  • ಮುಂಚೆ ಕಲಸಿದ್ದ ಮೈದಾ ಹಿಟ್ಟನ್ನು ನಿಂಬೆ ಗಾತ್ರದಲ್ಲಿ ತೆಗೆದು ಬಟ್ಟಲಿನಂತೆ ಹಳ್ಳಮಾಡಿ ಹೂರಣ ತುಂಬಿ ಅದೇ ಹಿಟ್ಟಿನಿಂದ ಮುಚ್ಚಿ ಲಟ್ಟಿಸಿ 
  • ಕಾದ ಕಾವಲಿಯ ಮೇಲೆ ತುಪ್ಪ ಬಳಸಿ ಸುಡುವುದು. 
  • ಬಿಸಿಬಿಸಿ ಇದ್ದಾಗಲೇ ಹಾಲು ತುಪ್ಪದೊಡನೆ ತಿನ್ನಲು ಕೊಡಿ

ಅತಿರಸ
ಬೇಕಾಗುವ ಸಾಮಗ್ರಿಗಳು 
ಬೆಳ್ತಿಗೆ ಅಕ್ಕಿ ಮೂರು ಲೋಟ ಬೆಲ್ಲ ಮೂರು ಲೋಟ ಕರಿಮೆಣಸಿನ ಪುಡಿ ಮುಕ್ಕಾಲು ಟೀ ಸ್ಪೂನ್ ಗಸಗಸೆ ಮೂರು ಟೀ ಸ್ಪೂನ್ ಎರಡು ಚಿಟಿಕೆ ಉಪ್ಪು ಕರಿಯಲು ಎಣ್ಣೆ
ಮಾಡುವ ವಿಧಾನ 

  • ಅಕ್ಕಿಯನ್ನು ತೊಳೆದು ಅರ್ಧ ಗಂಟೆ ನೆನೆಸಿ 
  • ನೀರು ಬಸಿದು ನೆರಳಲ್ಲಿ ಒಣಗಿಸಿ, ಕುಟ್ಟಿ ಪುಡಿಮಾಡಿ 
  • ಜರಡಿ ಹಿಡಿದು, ಅದಕ್ಕೆ ಕರಿಮೆಣಸಿನಪುಡಿ ಗಸಗಸೆ ಉಪ್ಪು ಬೆರೆಸಿ 
  • ಬೆಲ್ಲಕ್ಕೆ ಕಾಲು ಲೋಟ ನೀರು ಹಾಕಿ ನೂಲೆಳೆ ಪಾಕ ಮಾಡಿ 
  • ಇದಕ್ಕೆ ಹಿಟ್ಟಿನ ಮಿಶ್ರಣ ಹಾಕಿ ಚೆನ್ನಾಗಿ ಮಗುಚಿ ಕೆಳಗಿಳಿಸಿ 
  • ಆರಿದ ಬಳಿಕ ನಿಂಬೇಗಾತ್ರದ ಉಂಡೆ ಮಾಡಿ ಬೆರಳು ಗಾತ್ರದಷ್ಟು ದಪ್ಪಗೆ ತಟ್ಟಿ ಎಣ್ಣೆಯಲ್ಲಿ ಕರೆಯಿರಿ

ಹೆಸರುಕಾಳು ಹುಳಿ/ಪದಂಜಿ ಕೊದ್ದೆಲ್

ಬೇಕಾಗುವ ಸಾಮಗ್ರಿಗಳು  
ಹೆಸರುಕಾಳು ಒಂದು ಲೋಟ , ತೆಂಗಿನಕಾಯಿತುರಿ ಅರ್ಧ ಲೋಟ ,ಕರಿಮೆಣಸು ಏಳು/ಎಂಟು , ಜೀರಿಗೆ 1 ಚಮಚ , ಉದ್ದು ಮಾವಿನಹುಳಿ ಪುಡಿ ಅರ್ಧ ಚಮಚ
ಬೆಲ್ಲದ ಪುಡಿ ಎರಡು ಟೀಸ್ಪೂನ್ ,ರುಚಿಗೆ ಉಪ್ಪು

ಮಾಡುವ ವಿಧಾನ

  • ಹೆಸರುಕಾಳನ್ನು ಮೂರುಗಂಟೆ ನೀರಿನಲ್ಲಿ ನೆನೆಸಿ, ತೊಳೆಯಿರಿ.
  • ನಂತರ ಮೂರು ಲೋಟ ನೀರಿನಲ್ಲಿ ಬೇಯಿಸಿ.
  • ಕರಿಮೆಣಸು ಜೀರಿಗೆ ಉದ್ದನ್ನು ಹುರಿಯಿರಿ.
  • ಕಾಯಿತುರಿ ಮಾವಿನಹುಳಿಪುಡಿ ಬೆಲ್ಲ ಉಪ್ಪಿನೊಂದಿಗೆ ಹುರಿದು ಧಾನ್ಯಗಳನ್ನು ನುಣ್ಣಗೆ ರುಬ್ಬಿ.
  • ರುಬ್ಬಿದ ಮಸಾಲೆಯನ್ನು ಬೆಂದ ಹೆಸರುಕಾಳಿಗೆ ಹಾಕಿ ಕುದಿಸಿ.

ಹೆಸರುಬೇಳೆ ದೋಸೆ

ಬೇಕಾಗುವ ಸಾಮಗ್ರಿಗಳು
ಹೆಸರುಬೇಳೆ ಎರಡು ಲೋಟ, ಅಕ್ಕಿ ಅರ್ಧ ಲೋಟ, ಆರು ಹಸಿಮೆಣಸಿನ ಕಾಯಿ
ಗೋಲಿ ಗಾತ್ರದ ಶುಂಟಿ , ಉಪ್ಪು , ಒಂದು ಈರುಳ್ಳಿ ,ವಗ್ಗರಣೆಗೆ ಎಣ್ಣೆ ಸಾಸಿವೆ ಜೀರಿಗೆ ಕಡಲೇಬೇಳೆ ಉದ್ದಿನಬೇಳೆ ಕರಿಬೇವು, ಇಂಗು ಕೊತ್ತಂಬರಿ ಸೊಪ್ಪು ಕಾಲು ಕಟ್ಟು

ಮಾಡುವ ವಿಧಾನ  

  • ಹೆಸರುಬೇಳೆ ಅಕ್ಕಿಯನ್ನು 3 ಘಂಟೆ ನೆನೆಸಿ, ಹಸಿಮೆಣಸಿನ ಕಾಯಿ, ಶುಂಟಿ,ಉಪ್ಪು ಸೇರಿಸಿ ರುಬ್ಬಿಡಬೇಕು.
  • ರುಬ್ಬಿದ ಹಿಟ್ಟಿಗೆ ಈರುಳ್ಳಿ,ಕೊತ್ತಂಬರಿ ಸಣ್ಣಗೆ ಹೆಚ್ಚಿ ಕಲಸಿಡಿ
  • ವಗ್ಗರಣೆ ಹಾಕಿ, ತವ ಕಾಯಿಸಿ ದೋಸೆ ಹುಯ್ದು ಬಡಿಸಿ
  • ಈ ದೋಸೆಗೆ ಚಟ್ನಿ ಬೇಕಿಲ್ಲ

ಮಾವಿನ ಕಾಯಿ ಗೊಜ್ಜು 

ಬೇಕಾಗುವ ಸಾಮಗ್ರಿಗಳು
ಒಂದು ದೊಡ್ಡ ಮಾವಿನ ಕಾಯಿ,,ಎರಡು ಚಮಚ ಉಪ್ಪು, ಬೆಲ್ಲ ನೂರು ಗ್ರಾಂ
ಹಸಿಮೆಣಸಿನಕಾಯಿ ಐದು, ವಗ್ಗರಣೆಗೆ ಸ್ವಲ್ಪ ಎಣ್ಣೆ, ಕರಿಬೇವು,ಸಾಸಿವೆ, ಎರಡು ಒಣಮೆಣಸಿನಕಾಯಿ.

ಮಾಡುವ ವಿಧಾನ

  • ಮಾವಿನ ಕಾಯನ್ನು ಸಣ್ಣ ಚೂರುಗಳನ್ನಾಗಿ ಕತ್ತರಿಸಿಕೊಳ್ಳೂವುದು.
  • ಅದನ್ನು ಎರಡು ಬಟ್ಟಲು ನೀರಿನಲ್ಲಿ ಹಾಕಿ ಬೇಯಿಸಿ.
  • ನೀರು ಕಡಿಮೆಯಾಗಿ ಕಾಯಿ ಬೆಂದಾಗ ಹಸಿಮೆಣಸಿನಕಾಯಿ ಹೆಚ್ಚಿಹಾಕಿ,ಬೆಲ್ಲ ಪುಡಿಮಾಡಿ ಹಾಕಿ
  • ಸಾಸಿವೆ ಒಣಮೆಣಸಿನ ಕಾಯಿ ಇಂಗಿನ ವಗ್ಗರಣೆ ಹಾಕಿ,ಎರಡೂಬಾರಿ ಬಾಡಿಸಿ,ಉಣಬಡಿಸಿ.

 ಮೈಸೂರು ಪಾಕ್

Comments