Sydney ಯುಗಾದಿ ಸಂಭ್ರಮ !

Sydney ಯುಗಾದಿ ಸಂಭ್ರಮ ! 

ವರದಿ   - ದೀಪಿಕ ತ್ಯಾವಣಿಗೆ

PHOTOS

ಕಾಂಗೊರು ನಾಡಿನಲ್ಲಿ ಕನ್ನಡಿಗರ ಯುಗಾದಿ ಸಂಭ್ರಮ !!

ಹೌದು, ನಮ್ಮ ಸಿಡ್ನಿ ನಗರಿಯಲ್ಲಿ ಮೇ 22ರ ಸಂಜೆಯಂದು ಸಿಡ್ನಿ ಕನ್ನಡ ಶಾಲೆಯು ಯುಗಾದಿ ಹಬ್ಬವನ್ನು ಸಂಭ್ರಮಿಸಿತು. 

ಸಿಡ್ನಿ ಕನ್ನಡ ಶಾಲೆಯಲ್ಲಿ ಪ್ರತಿ ವರುಷವು ಸಹಾಯ ಧನಕ್ಕಾಗಿ ಯುಗಾದಿ ಹಬ್ಬದ ಸಂಭ್ರಮಾಚಾರಣೆಯನ್ನು ಮಾಡಿಕೊಂಡು ಬಂದಿರುತ್ತಾರೆ. 

ಸಿಡ್ನಿ ಕನ್ನಡ ಶಾಲೆಯು ಹದಿನೆಂಟು ವರುಷಗಳಗಳಿಂದ  ಮಕ್ಕಳಿಗೆ ಕನ್ನಡ ಪಾಠವನ್ನು ಮಾಡಿಕೊಂಡು ಬಂದಿದೆ. ಮೂರು ಜನ ಅಧ್ಯಾಪಕರಿಂದ ಪ್ರಾರಂಭವಾದ ಶಾಲೆ ಇಂದು ಹದಿನಾಲ್ಕು ಜನ ಅಧ್ಯಾಪಕರನ್ನು ಹೊಂದಿದೆ. ಕೇವಲ ಹದಿನೈದು ಮಕ್ಕಳಿಂದ ಪ್ರಾರಂಭವಾದ ಶಾಲೆಯಲ್ಲಿ ಈಗ ನೂರು ಜನ ಮಕ್ಕಳಿಗೆ ಕನ್ನಡ ಪಾಠ ಹೇಳಿಕೊಡಲಾಗುತ್ತಿದೆ. ಈ ಶಾಲೆಯು ಎರಡು ಶಾಖೆಗಳನ್ನು ಹೊಂದಿದೆ. ಕನಕಾಪುರ ನಾರಾಯಣ್ ರವರು ಶಾಲೆಯ  ಮುಖ್ಯ   ಪ್ರಾಂಶುಪಾಲರಾಗಿರುತ್ತಾರೆ. ನಾರಾಯಣ್ ರವರು ಶಾಲೆಯ ಪ್ರಾರಂಭಕ್ಕೆ ಮಾತ್ತು ಶಾಲೆಯ ಅಭಿವೃದ್ಧಿಗೆ ಮುಖ್ಯ  ಕಾರಣಕರ್ತರು, ಇವರ ಧರ್ಮಪತ್ನಿಯಾದ ರಾಜಿಯವರೂ  ಸಹ ಶಾಲೆಯ ಅಧ್ಯಾಪಕರಾಗಿರುತ್ತಾರೆ. ಇವರ ನಿಸ್ವಾರ್ಥ ಕನ್ನಡ ಪ್ರೇಮ ನಿಜಕ್ಕೂ ಶ್ಲಾಘನೀಯ.

ಮೇ 22ರಂದು ನಡೆದ ಯುಗಾದಿ ಕಾರ್ಯಕ್ರಮದಲ್ಲಿ  ಮಕ್ಕಳಿಂದ ಮತ್ತು ಸಿಡ್ನಿಯ ಕನ್ನಡದ ಕಲಾವಿದರಿಂದ 

ಮನರಂಜನೆ ಕಾರ್ಯಕ್ರಮವು ನಡೆಯಿತು. ಈ ಯುಗಾದಿ ಕಾರ್ಯಕ್ರಮವು ಮಕ್ಕಳ ಮತ್ತು ಕಲಾವಿದರ ಪ್ರತಿಭೆಯ ಅನಾವರಣಕ್ಕೆ ಸಾಕ್ಷಿಯಾಯಿತು. ಶಾಲೆಯ ಮಕ್ಕಳ ಪೋಷಕರ ನೆರವಿನಿಂದ ನಡೆದ ಈ ಕಾರ್ಯಕ್ರಮವು ಅಚ್ಚುಕಟ್ಟಾಗಿ ನೆರವೇರಿತು. 

ಕಾರ್ಯಕ್ರಮವನ್ನು ಶಿಲ್ಪ ಮತ್ತು ನಾನು ಅಂದರೆ ದೀಪಿಕಾ ನಿರೂಪಣೆ  ಮಾಡಿದೆವು. ಕಾರ್ಯಕ್ರಮವು ಮಕ್ಕಳ ಕಾರ್ಯಕ್ರಮದಿಂದ ಪ್ರಾರಂಭವಾಯಿತು. ಪುಟಾಣಿ ಶ್ರೇಯಸ್ ಕಾರ್ಯಕ್ರಮದ ಮೊದಲಿಗೆ ಸುಶ್ರಾವ್ಯವಾಗಿ ಕೊಳಲನ್ನು ನುಡಿಸಿದನು. ನಂತರ ಬಂದ ಸಿಯೋನ್ ಪುರಂದರದಾಸರ ಕೀರ್ತನೆಯನ್ನು ಹಾಡಿದನು. ಅಮ್ಮನೊಂದಿಗೆ ಬಂದ ಕಂದ ಅದ್ವಿತೀಯ ಬಾನದಾರಿಯಲ್ಲಿ ಸೂರ್ಯ ಜಾರಿ ಹೋದ ಎಂದು ಹಾಡಿದ. ಅವಳಿಜವಳಿಗಳಾದ ಶ್ರೇಯ ಶರಣ್ಯ ಜಾನಪದ ಗೀತೆಯನ್ನು ಚೆಂದವಾಗಿ ಹಾಡಿದರು.


ಮಕ್ಕಳೇ ತುಂಬಿದ್ದ ಕಾರ್ಯಕ್ರಮದಲ್ಲಿ ಮಕ್ಕಳನ್ನು ಖುಷಿ ಪಡಿಸಲು ದರ್ಶನ್ ತಮ್ಮ ಜಾದುವನ್ನು ಪ್ರದರ್ಶಿಸಿದರು. ಮಕ್ಕಳೆಲ್ಲ ದರ್ಶನ್ ರವರ ಜಾದುವನ್ನು ನೋಡಿ ಮಂತ್ರಮುಗ್ಧರಾದರು. ಜಾದೂ ಪ್ರದರ್ಶನದ ಮಧ್ಯದಲ್ಲಿ ರುಚಿಯಾದ ಸಮೋಸವನ್ನು ಪ್ರೇಕ್ಷಕರಿಗೆ ನೀಡಲಾಯಿತು.

ಜಾದುವಿನ ನಂತರ ಎಲ್ಲೆಲ್ಲೂ ಸಂಗೀತವೇ ಎಂದು ಹಾಡುವ ಮೂಲಕ ಸಮನ ಸಂಗೀತ ಲೋಕಕ್ಕೆ ಕರೆದೊಯ್ದಳು. ನಂತರ ಬಂದ ಸ್ಕಂದನು ಪವಡಿಸು ಪರ್ಮಾತ್ಮ ಎಂದು ಅತ್ಯಂತ 

ಸುಂದರವಾಗಿ ಹಾಡಿದನು

ಹಕ್ಕಿ ಹಾಡು ನೃತ್ಯವನ್ನು ಅದಿತಿ ಹಾಗೂ ಆದ್ಯ ಗುಬ್ಬಿಯಾಗಿ ಮತ್ತು ಅಹನ ಕಾಗೆಯಾಗಿ ಮುದ್ದು ಮುದ್ದಾಗಿ ಪ್ರದರ್ಶಿಸಿದರು.

ಪುಟಾಣಿ ಸಿಮ್ರನ್ ಯಾವ ಮೋಹನ ಮುರಳಿ ಕರೆಯಿತು ಎನ್ನುವ ಹಾಡನ್ನು ಸುಂದರವಾಗಿ ಹಾಡಿದಳು.

ಕುಮಾರಿ ನೀರಿಕ್ಷಾ ಭಟ್ ಆಕಾಶ ಭೂಮಿಯೆಂದು ಎನ್ನುವ ಹಾಡನ್ನು ಸುಶ್ರಾವ್ಯವಾಗಿ ಹಾಡಿದಳು. ಸಿಡ್ನಿಯ ಸ್ಟ್ರಾತ್ಫೀಲ್ಡ್ ನಿಂದ ಕನ್ನಡ ಕಲಿಯಲು ಬರುವ ಮಕ್ಕಳ ಗುಂಪೊಂದು ಶ್ರಾವಣ ಬಂತು ಶ್ರಾವಣ ಎನ್ನುವ ಹಾಡನ್ನು ಹಾಡಿದರು.

 ವಾಟಲಗ್ರೋವ್ ಕನ್ನಡ ಶಾಲೆಯ ಮಕ್ಕಳು ಕನ್ನಡ ಹಾಡುಗಳ ನೃತ್ಯವನ್ನು ಮನೋಹರವಾಗಿ ಪ್ರದರ್ಶಿಸಿದರು. ಅವರ ಅಚ್ಚುಕಟ್ಟಾದ ಪ್ರದರ್ಶನ ಅವರ ಅಭ್ಯಾಸ ಮತ್ತು ನೃತ್ಯಸಂಯೋಜಕರ ಪರಿಶ್ರಮವನ್ನು ಸಾರಿ ಹೇಳುತ್ತಿತ್ತು.

ನೃತ್ಯದ ನಂತರ ಕುಮಾರಿ ಸಿಂಧು ಆರಾಧಿಸುವೆ ಎಂದು ಹಾಡಿ ಸಂಗೀತಮಯ ವಾತಾವರಣವನ್ನು ಸೃಷ್ಠಿಸಿ ಪ್ರೇಕ್ಷಕರು ಅವಳ ಹಾಡಿಗೆ ತಾಳ ಹಾಕುವಂತೆ ಮಾಡಿದಳು.

ಪ್ರದರ್ಶನ ನೀಡಿದ ಮಕ್ಕಳಿಗೆ ಶಾಲೆಯವತಿಯಿಂದ ಸಿಹಿವಿತರಣೆ ಮಾಡಲಾಯಿತು.


ನಂತರ ಸಿಡ್ನಿಯ ಉದಯೋನ್ಮುಖ ಗಾಯಕಿ ಅರ್ಚನಾ ಬಾನಲ್ಲಿ ನಿನ್ನಿಂದ ಸೂರ್ಯೋದಯವೆಂದು ಅತ್ಯದ್ಭುತವಾಗಿ ಹಾಡಿದರು. ತುಂಗಾಬಿ ಶಾಖೆಯ ಕನ್ನಡ ಶಾಲೆಯ ಮಕ್ಕಳು 

ಯಮಲೋಕದಲ್ಲಿ ಕನ್ನಡವೆಂಬ ಕಿರು ನಾಟಕವನ್ನು ಪ್ರದರ್ಶಿಸಿದರು. ಈ ನಾಟಕವೂ ಕೂಡ ಮಕ್ಕಳಿಂದ ಕನ್ನಡ ಕಲಿಕೆಯ ಪಾಠವಾಗಿತ್ತು. ಮಕ್ಕಳೂ ಕೂಡ ಚೂರುಕಾಗಿ ಅಭಿನಯಿಸಿದರು. 

 ನಂತರ ಬಂದ ಸಿಡ್ನಿಯ ಹಾಡುಗಾರರದ ಕೇಶವ್ ರವರು ಹೊಸಬೆಳಕು ಮೂಡುತಿದೆ ಎಂದು ಸುಂದರವಾಗಿ ಹಾಡಿದರು.

ಮುಂದೆ ತುಂಗಾಬಿ ಕನ್ನಡ ಶಾಲೆಯ ಮಕ್ಕಳ ಮತ್ತು ಅವರ  ಅಮ್ಮಂದಿರಿಂದ ಸುಂದರ ಕನ್ನಡ ಹಾಡುಗಳ ಅತಿ ಸುಂದರವಾದ ನೃತ್ಯದ ಪ್ರದರ್ಶನ ನೆರವೇರಿತು. ಇದರ ನಂತರ

 ಶಾಲೆಯ ಪ್ರಾಂಶುಪಾಲರಾದ ನಾರಾಯಣ್ ರವರು ಮಕ್ಕಳ ಮಾತಿನ ಕಾಯಕ್ರಮವನ್ನು ಸಾದರ ಪಡಿಸಿದರು. ನಾರಾಯಣ್ ರವರು ಮುಗ್ಧ ಮಕ್ಕಳ ಮುದ್ದಾದ ಮಾತನ್ನು ತಮ್ಮ ಪ್ರಶ್ನೆಗಳ ಮುಲಕ ಹೊರಗೆಳೆದರು. ಈ ಕಾಯಕ್ರಮವು ಎಲ್ಲಾ ಕಾರ್ಯಕ್ರಮಗಳಿಗಿಂತ ವಿಭಿನ್ನವಾಗಿತ್ತು. 

ಈ ಕಾರ್ಯಕ್ರಮ ದ ನಂತರ ಕನ್ನಡ ಚಲನಚಿತ್ರ ಮತ್ತು ಧಾರವಾಹಿಗಳಲ್ಲಿ ಅಭಿನಯಿಸಿದ ಮತ್ತು ಎಸ್ ಪಿ ಬಾಲಸುಬ್ರಹ್ಮಣ್ಯಂ ರವರೊಡನೆ ವೇದಿಕೆ ಹಂಚಿಕೊಂಡ ಹಾಡುಗಾರ್ತಿ ಮಹಾಲಕ್ಷ್ಮೀ ರವರು ಭಾರತ ಭೂಷಿರ ಎನ್ನುವ ಹಾಡನ್ನು ಹಾಡಿ ಕೇಳುಗರ ಕಿವಿಯನ್ನು ತಣಿಸಿದರು.

ಕಾರ್ಯಕ್ರಮದ ಕೊನೆಯಲ್ಲಿ ಬಂದ ಸಿಡ್ನಿಯ ಹೆಸರಾಂತ ಹಾಡುಗಾರ ರಾಜೇಶ್ ರವರು ಕಣಕಣದೇ ಶಾರದೆಯೆಂದು ಹಾಡಿ ಎಲ್ಲರ ಮನಸೂರೆಗೊಂಡರು. ಕಾರ್ಯಕ್ರಮದ ನಂತರವೂ ಎಲ್ಲರೂ ಅವರ ಹಾಡನ್ನು ಗುನುಗುವಂತೆ 

ಮಾಡಿದರು. ಕನಕಾಪುರ ನಾರಾಯಣ್ ರವರು ಕಾರ್ಯಕ್ರಮಕ್ಕೆ ಸಹಕರಿಸಿದ ಎಲ್ಲರಿಗೂ ಧನ್ಯವಾದಗಳನ್ನು ಅರ್ಪಿಸಿದರು. ಕಾರ್ಯಕ್ರಮಕ್ಕೆ ಆಗಮಿಸಿದ ಎಲ್ಲರಿಗೂ ಕೊನೆಯಲ್ಲಿ ಭೋಜನದ ವ್ಯವಸ್ಥೆಯನ್ನು ಮಾಡಲಾಗಿತ್ತು.

ಕೋವಿಡ್ ಸಂಧರ್ಭದಲ್ಲಿ ವರುಷಗಳ ನಂತರ ನಡೆದ ಈ ಕನ್ನಡ ಕಾರ್ಯಕ್ರಮವು ಕನ್ನಡಿಗರಿಗೆ ಯುಗಾದಿಯ ಹೋಳಿಗೆಯನ್ನು ಸವಿದಷ್ಟೇ ರುಚಿಯನ್ನು ನೀಡಿತ್ತು. ಹೊರನಾಡಿನಲ್ಲಿ ಕನ್ನಡದ ಕಂಪನ್ನು ಪಸರಿಸುತ್ತಿರುವ ಕನ್ನಡ ಶಾಲೆಯ ಸಾರ್ಥಕದ ಕಾರ್ಯಕ್ರಮ ಯುಗಾದಿ ಸಂಭ್ರಮಾಚಾರಣೆಯಾಗಿತ್ತು.



Comments

  1. Karyakrama tumba chennagittu. Congragulations !

    ReplyDelete
  2. Nice to see programs being held in your country. looks like a very nice programs was expecting more photos. Nice to see new writers.

    ReplyDelete
  3. Wonderful program and happy to see our Kannada flag flying in Sydney also

    ReplyDelete
  4. This comment has been removed by the author.

    ReplyDelete
  5. Thank you Sir it was an great event

    Hope we can make it bigger event in future

    ReplyDelete
  6. This comment has been removed by the author.

    ReplyDelete
  7. Nice article about the event, I felt the presence while reading it. Thank you for the information, wonderful program to motivate young generation about the importance of our language Kannada,through such songs,dance and drama etc keep up the good work Team👍🏼 Best wishes 💐

    ReplyDelete
  8. Nice to see this article has attracted many readers. thanks to Smt Deepika and all the participants.

    ReplyDelete
  9. The program was very good and everyone enjoyed it. Happy to see the kids performing for kannada songs. Nicely summed up article covering all the events!! The article was a true reflection of what we enjoyed.

    ReplyDelete

Post a Comment