ದೇವರ ದಾಸಿಮಯ್ಯ (ಜೇಡರ ದಾಸಿಮಯ್ಯ)
- ಶ್ರೀಮತಿ ರಾಜಿ ಜಯದೇವ್
ದೇವರ ದಾಸಿಮಯ್ಯನವರು ಐತಿಹಾಸಿಕ
ವ್ಯಕ್ತಿ, ಮಹಾಪುರುಷರು. ಇವರು ಮೊಟ್ಟಮೊದಲನೆಯ ವಚನಕಾರರು ಎಂದು ಪ್ರಸಿದ್ದರಾಗಿದ್ದಾರೆ. ಇವರ
ಬಗ್ಗೆ ೧೨ನೇ ಶತಮಾನದಲ್ಲಿ ಅನೇಕ ಶಾಸನಗಳು ಸಿಕ್ಕಿವೆ.
“ಸೇಲೆ ಚೋಳನುಭಟ್ಟನನತರ್ಕ್ಯಂ
ಸಿಂದಒಲ್ಲಾಳ ನೀ
ಧರೆ ಕೊಂಡಾಡುವ ದಾಸಿಮಯ್ಯನೆಸೆದಿರ್ದೀ
ಭಕ್ತ ಸಂದೋಹ “
ಇವರ ಹೆಸರಿನ ಬಗ್ಗೆ ತುಂಬಾ
ವಿವಾದಗಳಿವೆ. ದೇವರ ದಾಸಿಮಯ್ಯ ಮತ್ತು ಜೇಡರ ದಾಸಿಮಯ್ಯ ಬೇರೆ ಬೇರೆ ವ್ಯಕ್ತಿಗಳು ಎಂದು ಕೆಲವು
ಸಂಶೋಧಕರ ಅಭಿಪ್ರಾಯ. ಹಲವಾರು ಶಾಸನಗಳಲ್ಲಿ ದೇವರ ದಾಸಿಮಯ್ಯನವರೇ ನೇಕಾರ ವೃತ್ತಿಯನ್ನು
ತೆಗೆದುಕೊಂಡಮೇಲೆ ಜೇಡರ ದಾಸಿಮಯ್ಯನವರಾದರು ಎಂದು ಉಲ್ಲೆಕಿಸಿದೆ ಎಂದು ಇತರ ಸಂಶೋಧಕರು ಹೇಳುತ್ತಾರೆ.
ದೇವರ ದಾಸಿಮಯ್ಯನವರು ಹುಟ್ಟಿದ್ದು
ಮುದನೂರು ಎಂಬ ಹಳ್ಳಿಯಲ್ಲಿ. ೧೦ ಅಥವಾ ೧೧ ನೇ ಶತಮಾನದಲ್ಲಿ. ಮುದನೂರಿನಲ್ಲಿ ರಾಮನಾಥ ದೇವರ
ದೇವಾಲಯವಿದೆ. ರಾಮಾಯಣದ ಶ್ರೀ ರಾಮ ಶಿವನ ಭಕ್ತನಾದುದರಿಂದ ರಾಮನಾಥ ಎಂದರೆ ಶಿವ ಎಂದು
ಹೇಳಲಾಗುತ್ತದೆ. ದೇವರ ದಾಸಿಮಯ್ಯ ರಾಮನಾಥರ ಭಕ್ತ. ಅಂತೆ ಇವರ ವಚನಗಳ ಅಂಕಿತನಾಮ ರಾಮನಾಥ. ಇವರ
ಮೂಲಮನೆಯಲ್ಲಿ ಇಂದಿಗೂ ಅವರ ಕುಲಜರೆ ವಾಸಿಸುತ್ತಿದ್ದಾರೆ. ಪ್ರತಿದಿನ ರಾಮನಾಥ ದೇವರ ಮತ್ತು
ದಾಸಿಮಯ್ಯನವರ ಪೂಜೆ, ರುದ್ರಾಭಿಷೇಕ ನಡೆಸುತ್ತಾರೆ.
ದಾಸಿಮಯ್ಯನವರು ಕಾಡಿನಲ್ಲಿ
ತಪಸ್ವಿಗಳಂತೆ ಜೀವಿಸುತ್ತಿದ್ದರಂತೆ. ಒಮ್ಮೆ ಶಿವನು ಕಾಣಿಸಿಕೊಂಡು ಎಲ್ಲಾ ಜನರಂತೆ ಕೆಲಸ
ಮಾಡುತ್ತಾ ಪ್ರಾಪಂಚಿಕ ಜಗತ್ತಿನಲ್ಲಿ ಬದುಕು ಎಂದನಂತೆ. (ಕಾಯಕವೇ ಕೈಲಾಸ). ಶಿವನ ಆಜ್ಞೆಯಂತೆ
ಕಾಡನ್ನು ತ್ಯಜಿಸಿ ತನ್ನ ಹಳ್ಳಿಗೆ ಬಂದು ನೇಕಾರ ವೃತ್ತಿಯನ್ನು ಕೈಗೊಂಡನಂತೆ. ಈಗ ನಾವು ದೇವಾಂಗ
ಅಥವಾ ಜಾಂದ್ರ ಕುರುವಿನ ಶೆಟ್ಟಿ ಸಮುದಾಯ ಎಂದು ಕರೆಯುವ ಜನರು ದೇವರ/ಜೇಡರ ದಾಸಿಮಯ್ಯನವರ
ಅನುಯಾಯಿಗಳು.
ಹೆಂಡತಿಯ ಹೆಸರು ದುಗ್ಗಲೆ.
ದಾಸಿಮಯ್ಯನವರ ಧರ್ಮಪ್ರಸಾರಕಾರ್ಯದಲ್ಲಿ ವೀರಶೈವ ಧರ್ಮ ಪರಾಯಣೆಯಾದ ದುಗ್ಗಲೆಯ ಸಹಾಯ
ವಿಶೇಷವಾಗಿತ್ತು ಎಂದು ಹಲವು ಶಾಸನಗಳಿಂದ ತಿಳಿದುಬಂದಿದೆ.
ದಾಸಿಮಯ್ಯನವರು
ಅಹಿಂಸೆಯನ್ನು ಬೋಧಿಸಿದರು. ಬೇಟೆಯಾಡಿ ಬದುಕುವ ಬೇಡರಿಗೆ ಮಾಂಸ ತಿನ್ನುವುದು ಬಿಡಿ. ಕಾಡಿನಲ್ಲಿ
ಸಿಗುವ ಹಣ್ಣು ಹಂಪಲುಗಳನ್ನು ಸೇವಿಸಿ. ಗಾಣದಿಂದ ಎಣ್ಣೆ ತೆಗೆದು ಮಾರುವ ವೃತ್ತಿಯನ್ನು ತೆಗೆದುಕೊಳ್ಳಿ
ಎಂದು ಬೋಧಿಸಿದರಂತೆ. ಅನಂತರ ನೇಕಾರ ವೃತ್ತಿಯನ್ನು ಬಿಟ್ಟು ಶಿಕ್ಷಕನ ವೃತ್ತಿಯನ್ನು
ತೆಗೆದುಕೊಂಡು, ಜೈನ ರಾಜನ ಹೆಂಡತಿಗೂ ಮತ್ತು ಜೈನ ಸಮುದಾಯದ ಅನೇಕರಿಗೂ ಶಿವನನ್ನು ಪೂಜಿಸುವಂತೆ ದೀಕ್ಷೆಕೊಟ್ಟರಂತೆ
.
ಜೇಡರ ದಾಸಿಮಯ್ಯನವರು ಅತ್ಯುತ್ತಮ ವಚನಕಾರರು. ವಚನಕಾರರು ಎಂದರೆ ಸಂತ ಕವಿಗಳು. ಹೆಚ್ಚಿನ
ಆಸೆಯಿಲ್ಲ. ದೈನೆಂದಿನ ಬದುಕಿಗೆ ಬೇಕಾಗುವಷ್ಟುನ್ನು ಪ್ರಾಮಾಣಿಕವಾಗಿ ದುಡಿದು ಬದುಕುವವರು.
ನುಡಿದಂತೆ ನಡೆಯುವವರು. ರಾಮನಾಥ ಎಂಬ ಅಂಕಿತ ನಾಮವಿದ್ದ ೧೭೬
ವಚನಗಳಿವೆ. ವಚನಗಳ ಮೂಲಕ ಶರಣಧರ್ಮವನ್ನು ರೂಪಿಸುವ ಪರಿಭಾಷೆಯನ್ನು ತಿಳಿಸಿದ್ದಾರೆ.
ಇವರ ವಚನಗಳಲ್ಲಿರುವ ಸಂದೇಶ: ಪ್ರಾಮಾಣಿಕವಾಗಿ ಕೆಲಸಮಾಡು, ದೇವರಲ್ಲಿ
ಅತಿ ಭಕ್ತಿ ಬೇಡ, ಯಾರನ್ನೂ ವಂಚಿಸಬೇಡ, ಹೆಣ್ಣುಗಂಡೆಂಬ ಬೇಧಬಾವ ಬೇಡ. ಇತ್ಯಾದಿ. ಧಾರ್ಮಿಕ ಸಂಸ್ಥೆಗಳ
ಅನಾಚಾರ ಕಂಡು ನೊಂದು ಕೆಲವು ವಚನಗಳನ್ನು ರಚಿಸಿದ್ದಾರೆ. ಸಂಸಾರದಲ್ಲಿರುವವರಿಗೆ ಬೇಕಾದ
ಶಿಸ್ತು, ಸಂಯಮದ ಬಗ್ಗೆ ಹೇಳಿದ್ದಾರೆ.
ಇವರ ಕೆಲವು ವಚನಗಳು
೧. ಮೊಲೆ ಮೂಡಿ
ಬಂದಡೆ ಹೆಣ್ಣೆಂಬರು
ಗಡ್ಡ ಮೀಸೆ ಬಂದರೆ ಗಂಡೆಂಬರು
ನಡುವೆ ಸುಳಿವ
ಆತ್ಮನು ಹೆಣ್ಣೂ ಅಲ್ಲ ಗಂಡೂ ಅಲ್ಲ ಕಾಣಾ ರಾಮನಾಥಾ.
೨. ಇಳೆ ನಿಮ್ಮ ದಾನ
, ಬೆಳೆ ನಿಮ್ಮ ದಾನ, ಸುಳಿದು ಬೀಸುವ ವಾಯು ನಿಮ್ಮ ದಾನ
ನಿಮ್ಮ
ದಾನವನ್ನುಂಡು ಅನ್ಯರ ಹೊಗಳುವ ಕುನ್ನಿಗಳನೇನೆಂಬೆ ರಾಮನಾಥಾ.
೩. ಅಂತರಂಗ
ಬಹಿರಂಗದಲ್ಲಿ
ಸರ್ವಚಾರ ಸಂಪತ್ತಿನ
ಆಚರನೆಯನರಿಯದ
ಮೂಡಾತ್ಮಂಗೆ ಲಿಂಗಂಗ ಸಮರಸವ ಹೇಳಿ
ಸರ್ವಾಂಗ
ಸ್ನಾನಧೂಳಿನ ನಾಲ್ವತ್ತೆಂಟು ಸ್ನಾನಂಗಳಲ್ಲಿ ಧಾರಣ
ಕ್ರಿಯಾಭಸಿತವ
ಧರಿಸುವ ನಿರ್ಣಯವ ಹೇಳಿ
ಅಂತರಂಗದ ಜಪವ
ಹೇಳುವನೊಬ್ಬ ಆಚಾರದ್ರೋಹಿ ನೋಡಾ ರಾಮನಾಥಾ.
೪. ಭಕ್ತರ ಮಠವೆಂದು
ಹೋದೆಡೆ
ಆ ಭಕ್ತ ಭಕ್ತಂಗೆ
ಅಡಿ ಇಟ್ಟು ಇದಿರೆದ್ದು ನಡೆದು
ಹೊಡೆಗೆಡೆದು
ಒಡಗೊಂದು ಬಂದು
ವಿಭೂತಿ
ವೀಳೆಯವನಿಕ್ಕಿ ಪಾದಾರ್ಚನೆಯ ಮಾಡಿ
ಸಮಯವನರಿತು
ಲಿಂಗಾರ್ಚನೆಯ ಮಾಡಿಸಿ
ಒಕ್ಕುದ ಕೊಂಡು
ಒಲಾಡುತಿಪ್ಪುದೆ ಭಕ್ತಿ
ಹೀಗಲ್ಲದೆ ಬೆಬ್ಬನೆ
ಬೆರೆತು, ಬಿಬ್ಬನೆ ಬೀಗಿ
ಅಹಂಕಾರಭರಿತನಾಗಿಪ್ಪವನ
ಮನೆಯ
ಲಿಂಗಸನುಮತರು
ಹೊಗರು ಕಾಣಾ ರಾಮನಾಥಾ.
The life of Devara Dasimayya is a fine example of how one can be a householder and still attain exalted spiritual heights. He was a beacon of light to many seekers of truth from all walks of life.
ReplyDeleteNice and simple article. Did not know that his ankitha was Raamanaatha thanks.
ReplyDeleteSmt Rajeshwari you have proved that you can also write such nice articles too. ವಿವರಣೆ ಮತ್ತು ಉದಾಹರಿತವಾಗಿ ಬರೆದಿರುವ ಆಯ್ದ ವಚನಗಳು ಚೆನ್ನಾಗಿವೆ. ಆರೋಗ್ಯ ಅಂಕಣದ ಜೊತೆ ತಾವು ಲೇಖನವನ್ನೂ ಚೆನ್ನಾಗಿ ಬರೆದಿದ್ದೀರಿ. ಮುಂದೊಮ್ಮೆ ಪುಟ್ಟ ಕಥೆಯನ್ನೂ ಬರೆಯಿರಿ.
ReplyDelete